ಉಡುಪಿ: ಡೀಸೆಲ್ ಬೆಲೆ ಇಳಿಯುತ್ತಿದ್ದರೂ, ಸಾರಿಗೆ ದರವನ್ನು ಸಾರಿಗೆ ಇಳಿಸಲು ಸಾಧ್ಯವಿಲ್ಲ, ಪೆಟ್ರೋಲ್, ಡಿಸೆಲ್ ಬೆಲೆಯು ಚಿನ್ನದ ದರದಂತೆ ಏರಿಳಿತ ಕಾಣುವುದು ಸಹಜ ಎಂದು ರಾಜ್ಯದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಸ್ಪಷ್ಟಪಡಿಸಿದ್ದಾರೆ.

ಅವರು ಇಂದು ಉಡುಪಿ ಜಿಲ್ಲೆಗೆ ಭೇಟಿ ನೀಡಿದಾಗ ಮಾಧ್ಯಮದೊಂದಿಗೆ ಮಾತನಾಡಿದರು, ಬಿಜೆಪಿಯು ಪೆಟ್ರೋಲ್ ಮತ್ತು ಡಿಸೆಲ್ ಬೆಲೆಯ ಬಗ್ಗೆ ನಡೆಸುತ್ತಿರುವ ಪ್ರತಿಭಟನೆಯು ರಾಜಕೀಯ ಪ್ರೇರಿತವಾಗಿದೆ. ಅವರಿಗೆ ಪ್ರತಿಭಟನೆ ಮಾಡಲು ನೈತಿಕ ಹಕ್ಕಿಲ್ಲ, ಅವರಿಗೆ ಸಾಧ್ಯವಾದರೆ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಸಾರಿಗೆ ದರವನ್ನು ಮೊದಲು ಇಳಿಸಲಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಜೆನಮರ್ು ಯೋಜನೆಯಲ್ಲಿ 545 ಬಸ್ಗಳನ್ನು ರಸ್ತೆಗೆ ಇಳಿಸಲಾಗುವುದು, ಇದರಲ್ಲಿ ಉಡುಪಿ ಜಿಲ್ಲೆಗೆ 30 ಬಸ್ಗಳು ಸಂಚರಿಸಲಿದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಂತರ ಸಚಿವರು ಉಡುಪಿ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಪಕ್ಷದ ನಾಯಕರೊಂದಿಗೆ ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.
