ವಾಮಂಜೂರಿನಲ್ಲಿ ಉಚಿತ,ಆರೋಗ್ಯ ತಪಾಸಣಾ ಶಿಬಿರ
ಕೈಕಂಬ: ಆರ್‌ಜಿ ಫೌಂಡೇಶನ್, ಮಹಿಳಾ ಸಂವೇದನಾ ವೇದಿಕೆ ಮತ್ತು ಶ್ರೀ ರಾಮ ಭಜನಾ ಮಂದಿರದ ಆಶ್ರಯದಲ್ಲಿ ಹಾಗೂ ಕಂಕನಾಡಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಇದರ ಜಂಟಿ ಸಹಯೋಗದಲ್ಲಿ ಜೂ. ೩೦ರಂದು ವಾಮಂಜೂರಿನ ಶ್ರೀ ರಾಮ ಭಜನಾ ಮಂದಿರದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಿತು.

ಮಂದಿರದಲ್ಲಿ ಆಯೋಜಿಸಲಾದ ಸರಳ ಸಮಾರಂಭದಲ್ಲಿ ಆರ್. ಜಿ. ಫೌಂಡೇಶನ್‌ನ ಅಧ್ಯಕ್ಷ ಆರ್. ಜಿ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ವಾಮಂಜೂರು ಚರ್ಚ್ನ ಧರ್ಮಗುರು ಫಾ. ಜೇಮ್ಸ್ ಡಿ’ಸೋಜ, ವಾಮಂಜೂರು ಜುಮ್ಮಾ ಮಸೀದಿಯ ಅಧ್ಯಕ್ಷ ಟಿ. ಇಬ್ರಾಹಿಂ, ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಸತೀಶ್ ಶೆಟ್ಟಿ ಮೂಡುಜಪ್ಪುಗುತ್ತು, ತಿರುವೈಲು ವಾರ್ಡ್ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್, ವಾಮಂಜೂರು ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜ್‌ಕುಮಾರ್ ಶೆಟ್ಟಿ ತಿರುವೈಲುಗುತ್ತು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸಾರಿಕಾ, ಸಂವೇದನಾ ಮಹಿಳಾ ವೇದಿಕೆ ಅಧ್ಯಕ್ಷೆ ಮರಿಯಾ ಕುಟಿನ್ಹಾ, ವೈಟ್‌ಗ್ರೋ ಎಲ್‌ಎಲ್‌ಪಿ ಪಾಲುದಾರರಾದ ಗ್ಲ್ಯಾಡಿ ಆಲ್ವಾರಿಸ್ ಹಾಗೂ ಪಿಲೋಮಿನಾ ಲೋಬೊ, ಕಾರ್ಯಕ್ರಮದ ಸಂಚಾಲಕಿ ಬಬಿತಾ, ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗ. ಇನಾಯತ್ ಅಲಿ, ಸುರೇಂದ್ರ ಕಂಬಳಿ ಸಹಿತ ವಾಮಂಜೂರು ಪರಿಸರದ ನೂರಾರು ಮಂದಿ ಆರೋಗ್ಯ ತಪಾಸಣೆ ನಡೆಸಿದರು.