ಬಂಟ್ವಾಳ ಲಯನ್ಸ್ ಕ್ಲಬ್ ಬಂಟ್ವಾಳ ನೂತನ ಅಧ್ಯಕ್ಷರಾಗಿ ರಾಧಕೃಷ್ಣ ಆಯ್ಕೆ
ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳ ಇದರ ನೂತನ ಸಾಲಿನ ಅಧ್ಯಕ್ಷರಾಗಿ ಯುವ ಸಂಘಟಕ ರಾಧಕೃಷ್ಣ ಬಂಟ್ವಾಳ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿ ದೇವಿಕಾ ದಾಮೋದರ್, ಜೊತೆ ಕಾರ್ಯದರ್ಶಿ ವಸಂತಿ ಎಲ್. ಶೆಟ್ಟಿ, ಕೋಶಾಧಿಕಾರಿ ಬಿ. ದೇವಪ್ಪ ಪೂಜಾರಿ, ಜೊತೆ ಕೋಶಾಧಿಕಾರಿ ರವಿ ರೈ, ನಿಕಟಪೂರ್ವಾಧ್ಯಕ್ಷ ಪ್ರಶಾಂತ್ ಕೋಟ್ಯಾನ್, ಪ್ರಥಮ ಉಪಾಧ್ಯಕ್ಷ ರೋಹಿತಾಶ್ವ ಎಂ., ದ್ವಿತೀಯ ಉಪಾಧ್ಯಕ್ಷ ಚಿತ್ರ ಜೆ. ಎಡಪಡಿತ್ತಾಯ, ತೃತೀಯ ಉಪಾಧ್ಯಕ್ಷ ಸುನೀಲ್ ಬಿ., ಮೆಂಟರ್ ವಸಂತಕುಮಾರ್ ಶೆಟ್ಟಿ, ಎಲ್‌ಸಿಈಎಫ್ ಸಂಚಾಲಕ ಸುಧಾಕರ ಆಚಾರ್ಯ, ಕ್ಲಬ್ ಸರ್ವಿಸ್ ಚೇಯರ್‌ಮನ್ ಉಮೇಶ್ ಆಚಾರ್, ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ ಚೆಯರ್‌ಮನ್ ತಫೋಧನ್ ಶೆಟ್ಟಿ, ಮೆಂಬರ್‌ಶಿರ್ಫ ಚೆಯರ್‌ಮನ್ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಸಂಪಾದಕ ದಾಮೋದರ ಬಿ.ಎಂ. ಕ್ಲಬ್ ಅಡ್ಮನಿಸ್ಟ್ರೇಟರ್ ಡಾ. ಧೀರಜ್ ಹೆಬ್ರಿ, ಟೈಲ್ ಟ್ವಿಸ್ಟರ್ ರಾಘವೇಂದ್ರ ಕಾರಂತ್, ಲಯನ್ ಟೇಮರ್ ಬಿ. ಸತ್ಯನಾರಾಯಣ ರಾವ್ ಹಾಗೂ ೧೨ ಮಂದಿ ನಿರ್ದೇಶಕರು, ಗೌರವ ಸಲಹೆಗಾರರು ಹಾಗೂ ಸಲಹೆಗಾರರನ್ನು ಆಯ್ಕೆಗೊಳಿಸಲಾಯಿತು.