Published On: Sun, Jun 23rd, 2024

ಯುವವಾಹಿನಿ ಬಂಟ್ವಾಳ ಘಟಕದ ಪದಗ್ರಹಣ ಸಮಾರಂಭ

ಬಂಟ್ವಾಳ : ಯುವವಾಹಿನಿ ಯುವಕರ ಸಾಧನೆಗಳ ಹಿಂದಿನ ಶಕ್ತಿಯಾಗಿದೆ,  ಎಂದು ಸಿದ್ದಕಟ್ಟೆ ಪ್ರೌಢಶಾಲಾ ಶಿಕ್ಷಕ ಮಹೇಶ್ ಕರ್ಕೇರ ಹೇಳಿದರು. ಅವರು  ಭಾನುವಾರ ಬಿ.ಸಿ.ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ( ರಿ) ಬಂಟ್ವಾಳ ತಾಲೂಕು ಘಟಕದ 2024-25 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.


ಗುರುಪರಂಪರೆಯ ಮೂಲಕ ಸಂಸ್ಕಾರ, ಸಂಸ್ಕೃತಿಯು ಅನುಷ್ಠಾನಗೊಳ್ಳುವ ಅಗತ್ಯವಿದ್ದು, ಶಿಕ್ಷಣದ ಮಹತ್ವದ ಕಡೆ  ಸಂಘಟನೆಗಳ ಗಮನ ಕೇಂದ್ರೀಕೃತಗೊಂಡಾಗ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ, ಈ ನಿಟ್ಟಿನಲ್ಲಿ ಯುವವಾಹಿನಿಯ ಸಾಧನೆಯು ಶ್ಲಾಘನೀಯ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಬಂಟ್ವಾಳ  ಘಟಕದ ಅಧ್ಯಕ್ಷರಾದ ಹರೀಶ್ ಕೋಟ್ಯನ್ ಕುದನೆ ವಹಿಸಿದ್ದರು.


   ಶುಭಲಕ್ಮೀ ಸಮೂಹ ಸಂಸ್ಥೆಗಳ ಚಂದ್ರಾವತಿ ಸೇಸಪ್ಪ ಕೋಟ್ಯಾನ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.                                ಯುವವಾಹಿನಿ (ರಿ.)ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ  ಯುವವಾಹಿನಿ (ರಿ.)ಬಂಟ್ವಾಳ ತಾಲೂಕು ಘಟಕದ  ನೂತನ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಅಧ್ಯಕ್ಷ ದಿನೇಶ್ ಸುವರ್ಣ ರಾಯಿ,ಪ್ರಥಮ ಉಪಾಧ್ಯಕ್ಷ ನಾರಾಯಣ ಪೂಜಾರಿ ಪಳ್ಳಿಕಂಡ, ದ್ವಿತೀಯ ಉಪಾಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು, ಕಾರ್ಯದರ್ಶಿ ಚೇತನ್ ಮುಂಡಾಜೆ, ಜೊತೆ ಕಾರ್ಯದರ್ಶಿಸುನೀಲ್ ಸಾಲ್ಯಾನ್ ರಾಯಿ ಕೋಶಾಧಿಕಾರಿ ಗೀತಾ ಜಗದೀಶ್ ಕಂಜತ್ತೂರು
ಸಾಂಸ್ಕೃತಿಕ ನಿರ್ದೇಶಕ ಧನುಷ್ ಮಧ್ವ, ಕ್ರೀಡಾ ನಿರ್ದೇಶಕ ಮಧುಸೂಧನ್ ಮಧ್ವ, ಆರೋಗ್ಯ ನಿರ್ದೇಶಕ
ಮಹೇಶ್ ಬೊಳ್ಳಾಯಿ, ಸಮಾಜ ಸೇವಾ ನಿರ್ದೇಶಕ ಪುರುಷೋತ್ತಮ್ ಕಾಯರ್‌ಪಲ್ಕೆ, ಕಲೆ ಮತ್ತು ಸಾಹಿತ್ಯ ನಿರ್ದೇಶಕ ಲೋಹಿತ್ ಕನಪಾದೆ,  ವ್ಯಕ್ತಿತ್ವ ವಿಕಸನ ನಿರ್ದೇಶಕ ರಾಜೇಂದ್ರ ಪಲ್ಲಮಜಲು, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕ ಕಿರಣ್ ರಾಜ್ ಪೂಂಜರಕೋಡಿ, ನಾರಾಯಣಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಕುಮಾರ್ , ವಿದ್ಯಾರ್ಥಿ ಸಂಘಟನೆ ನಿರ್ದೇಶಕ ಬ್ರಿಜೇಶ್ ಕಂಜತ್ತೂರು,ಪ್ರಚಾರ ನಿರ್ದೇಶಕ ಶ್ರವಣ್ ಅಗ್ರಬೈಲು, ವಿದ್ಯಾನಿಧಿ ನಿರ್ದೇಶಕ
ವಿಕ್ರಮ್ ಶಾಂತಿ, ‘ಮಹಿಳಾ ಸಂಘಟನಾ ನಿರ್ದೇಶಕಿ ಹರಿಣಾಕ್ಷಿ ನಾವೂರು, ಸಂಘಟನಾ ಕಾರ್ಯದರ್ಶಿಗಳಾದ ಉದಯ್ ಪೂಜಾರಿ ಮೇನಾಡು ಸೃಜನಿ ಬೊಳ್ಳಾಯಿ ಇವರು ಪ್ರತಿಜ್ಞಾವಿಧಿ  ಸ್ವೀಕಾರ ಮಾಡಿದರು 
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಸಂಜೀವ ಪೂಜಾರಿ ಗುರುಕೃಪಾ,ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.

       
ಗೌರವ ಅಭಿನಂದನೆ :   

ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ನಿಖಿಲ್ ಪೂಜಾರಿ, ವಿನಿಲ್ ಪೂಜಾರಿ ಹಾಗೂ ಬಂಟ್ವಾಳ ತಾಲೂಕು ಗುತ್ತಿಗೆದಾರ ಸಂಘದ ಅಧ್ಯಕ್ಷರಾದ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಹಾಗೂ ಬಂಟ್ವಾಳ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷರಾದ ಸುಧೀರ್ ಪೂಂಜರೆಕೋಡಿ ಇವರನ್ನು ಅಭಿನಂದಿಸಲಾಯಿತು.

               
ಈ ಸಂದರ್ಭದಲ್ಲಿ 30ಕ್ಕೂ ಹೆಚ್ಚು ಸದಸ್ಯರು ಯುವವಾಹಿನಿ ಬಂಟ್ವಾಳ ಘಟಕದ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಹಾಗೂ ಕಳೆದ ಒಂದು ವರ್ಷದಲ್ಲಿ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಿದ ಹರೀಶ್ ಕೋಟ್ಯಾನ್ ಕುದನೆ ಮತ್ತು ನಿಕೇಶ್ ಕೋಟ್ಯಾನ್ ಇವರನ್ನು ಈ ಸಂದರ್ಭದಲ್ಲಿ ಬಂಟ್ವಾಳ ಘಟಕದ ಪರವಾಗಿ ಅಭಿನಂದಿಸಲಾಯಿತು.


   ಸಹನಾ ಕರ್ಕೆರ ಪ್ರಾರ್ಥಿಸಿ , ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ ಸ್ವಾಗತಿಸಿದರು, ಮಾಜಿ ಅಧ್ಯಕ್ಷ ರಾಜೇಶ್ ಬಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ನಿಕೇಶ್ ಕೋಟ್ಯಾನ್ ವರದಿ ವಾಚಿಸಿದರು, ನೂತನ ಕಾರ್ಯದರ್ಶಿ ಚೇತನ್ ಮುಂಡಾಜೆ  ವಂದಿಸಿದರು, ಯುವವಾಹಿನಿ ಬೆಳ್ತಂಗಡಿ ಘಟಕದ ಸದಸ್ಯೆ ಪ್ರಜ್ಞಾ ಪೂಜಾರಿ ಓಡಿಲ್ನಾಳ ಕಾರ್ಯಕ್ರಮ ನೀರೂಪಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter