Published On: Fri, Jun 21st, 2024

ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿಆಗತ- ಸ್ವಾಗತ ಕಾರ್ಯಕ್ರಮ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ  ೨೦೨೪-೨೫ನೇ ಸಾಲಿನ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಆಗತ- ಸ್ವಾಗತ ಕಾರ್ಯಕ್ರಮವು ಮಧುಕರ ಸಭಾಂಗಣದಲ್ಲಿ ನಡೆಯಿತು. ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಆರತಿ ಬೆಳಗುವುದರ ಮೂಲಕ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳು ದೀಪ ಪ್ರಜ್ವಲನೆ ಮತ್ತು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ‍್ಯಕ್ರಮಕ್ಕೆ ಚಾಲನೆ ನೀಡಿದರು. 

ವಿದ್ಯಾಕೇಂದ್ರದ ಸಂಸ್ಥಾಪಕರು,ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀರಾಮ ವಿದ್ಯಾಕೇಂದ್ರವು ವಿದ್ಯಾರ್ಥಿಗಳ ಮನಸ್ಸಿನ ಅಜ್ಞಾನದ ಕತ್ತಲೆಯನ್ನು ಸಂಸ್ಕಾರ ಎಂಬ ದೀಪ ಬೆಳಗುವುದರ ಮೂಲಕ ನಾಶ ಮಾಡುವ ಜಗತ್ತಿಗೆ ಮಾದರಿಯಾಗುವ ಶಿಕ್ಷಣ  ಸಂಸ್ಥೆಯಾಗಿದೆ. ಈ ಉದ್ದೇಶದಿಂದ  ಭಾರತೀಯ ಚಿಂತನೆಗಳು ಮತ್ತು ಸಂಸ್ಕೃತಿಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಮತ್ತು ತಮ್ಮ ಜೀವನದಲ್ಲಿ ರಾಷ್ಟ್ರೀಯ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು” ಎಂದರು.

ಬೆಂಗಳೂರು ಶ್ರೀ ಕೃಷ್ಣ ವೆಂಚರ್ಸ್ ಆಡಳಿತ ಪಾಲುದಾರರಾದ ಕೆ ದಾಮೋದರ ರೆಡ್ಡಿ  ಅತಿಥಿಯಾಗಿ ಭಾಗವಹಿಸಿ ಮಾತನಾಡಿ, “ಮೌಲ್ಯ ಶಿಕ್ಷಣವನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು”ಎಂದು ಹೇಳಿದರು.ಇನ್ನೋರ್ವ ಅತಿಥಿ ಬೆಂಗಳೂರು ಸೋನಾ ಗ್ರೂಪ್ ಆಫ್ ಇಂಡಸ್ಟ್ರೀಸ್ ನಿರ್ದೇಶಕರಾದಗೌತಮ್ ಕಮ್ಮಾಜೆ  ಮಾತಿನಾಡಿ “ಶ್ರೀರಾಮ ಪ್ರೌಢಶಾಲೆಯ ಶಿಕ್ಷಣವು ವಿಭಿನ್ನ ರೀತಿಯಲ್ಲಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಮುಂದಿನ ಜೀವನದಲ್ಲಿ ಉತ್ತಮ ನಾಯಕನಾಗವ ಅವಕಾಶ ಇದೆ” ಎಂದು ತಿಳಿಸಿದರು.

ಕಟೀಲಿನ ಕೃಷಿ ಉದ್ಯಮಿ ವಿಕಾಸ್ ತೋಳಾರ್ , ಗೌರಮ್ಮ ದಾಮೋದರ ರೆಡ್ಡಿ, ನಿತಿನ್ ಡಿ ಮತ್ತು ಸಚಿನ್ ಡಿ  ಹಾಗೂ ವಿನುತಾ. ಎಸ್. ಮತ್ತು ದಾಮೋದರ ರೆಡ್ಡಿಯವರ ಸಹೋದರಿ ಗೌರಮ್ಮ, ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಹಸಂಚಾಲಕರಾದ ರಮೇಶ್ ಎನ್., ಮುಖ್ಯೋಪಾಧ್ಯಾಯರಾದ ಗೋಪಾಲ್ ಎಂ, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಅಗ್ನಿಹೋತ್ರಕ್ಕೆ ಘೃತಾಹುತಿಯನ್ನು ಮಾಡಿ, ಭಾರತಾಂಬೆಗೆ ಪುಷ್ಪಾರ್ಚನೆ ಮತ್ತು ಹಿರಿಯರಿಂದ ತಿಲಕ ಧಾರಣೆಯೊಂದಿಗೆ ಆಶೀರ್ವಾದ ಪಡೆದರು.

೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಭೂಷಣ್, ನಿಖಿತಾ ಮತ್ತು ಆಕಾಶ್ ಇವರನ್ನು ಗೌರವಿಸಲಾಯಿತು.

ವಿದ್ಯಾರ್ಥಿಗಳಾದ ವೈದೇಹಿ ಮತ್ತು ಅನುಶ್ರೀ ಪ್ರೇರಣಾ ಗೀತೆ ಹಾಡಿದರು.ಅಂಕಿತ ಸ್ವಾಗತಿಸಿ, ಪ್ರಾಣೇಶ್ ವಂದಿಸಿದರು.ಪ್ರೇಕ್ಷಾ ಕಾರ್ಯಕ್ರಮ  ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter