ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಬಿ.ಸಿ.ರೋಡಿನಲ್ಲಿ ರಸ್ತೆ ತಡೆ
ಬಂಟ್ವಾಳ: ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಬೆಲೆಯನ್ನು ಹೆಚ್ಚಿಸಿರುವುದನ್ನು ಖಂಡಿಸಿ ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಬಿ.ಸಿ.ರೋಡಿನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಈ ಸಂದರ್ಭ ಬಂಟ್ಚಾಳ ನಗರ ಪೊಲೀಸರು ಪ್ರತಿಭಟನಾಕಾರರನ್ನು ಸಾಂಕೇತಿಕವಾಗಿ ವಶಕ್ಕೆ ತೆಗೆದುಕೊಂಡು ಬಿಡುಗಡೆಗೊಳಿಸಿದರು.
ಇದಕ್ಕು ಮುನ್ನು ಬಿ.ಸಿ.ರೋಡಿನ ಪ್ಲೈ ಓವರ್ ಕೆಳಭಾಗದಲ್ಲಿ ನಡೆದ ಪ್ರತಿಭಟನಾಕಾರರನ್ನುದ್ಧೇಶಿಸಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಅವರು ಕಾಂಗ್ರೆಸ್ ಬಡವರ ಕಲ್ಯಾಣದ ಮುಖವಾಡ ಹಾಕಿ ಅಧಿಕಾರಕ್ಕೆ ಬಂದ ಬಳಿಕ ಒಂದು ವರ್ಷದಲ್ಲಿ ತೈಲ ,ಮದ್ಯ,ವಿದ್ಯುತ್ ಸಹಿತ ವಿವಿಧ ವಸ್ತುಗಳ ಬೆಲೆ ಏರಿಸುವ ಮೂಲಕ ಜನರ ಜೀವನದ ಮೇಲೆ ಚೆಲ್ಲಾಟವಾಡುತ್ತಿದೆಗ್ಯಾರಂಟಿಯಿಂದಾಗಿ ಸರಕಾರದ ಬೊಕ್ಕಸವೇ ಖಾಲಿಯಾಗಿದ್ದು,ಅಭಿವೃದ್ಧಿ ಕಾರ್ಯಗಳಿಗೂ ಚಿಕ್ಕಾಸು ಬಿಡುಗಡೆ ಮಾಡುತ್ತಿಲ್ಲ ಎಂದು ಟೀಕಾ ಪ್ರಹಾರಗೈದರು.
ಲೋಕಸಭೆಯಲ್ಲಿ ಅಭೂತಪೂರ್ವ ಗೆಲುವಿನಲ್ಲಿ ಬಂಟ್ವಾಳ ಕ್ಷೇತ್ರದ ಜನರು ಉತ್ತಮ ಬೆಂಬಲ ನೀಡಿದ್ದಾರೆ. ಈ ಚುನಾವಣೆಯ ಗೆಲುವನ್ನು ಅರಗಿಸಿಲಾರದೆ ಕಾಂಗ್ರೆಸ್ ಪಕ್ಷ ಬೆಲೆ ಏರಿಕೆಯ ಅಸ್ತ್ರದ ಮೂಲಕ ರಾಜ್ಯದ ಜನರ ಮೇಲೆ ಸವಾರಿ ಮಾಡಲು ಹೊರಟಿದೆ ಎಂದ ಅವರು ಮುಂದಿನ ದಿನಗಳಲ್ಲಿ ಇಂತಹ ನೀಚ ಸರಕಾರವನ್ನು ರಾಜ್ಯದ ಜನತೆ ಕಾಂಗ್ರೆಸ್ ನ್ನು ಅಧಿಕಾರದಿಂದ ಕಿತ್ತೊಗೆಯಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ರಾಜ್ಯದ ಆರ್ಥಿಕ ಸ್ಥಿತಿ ನಂಬರ್ ಒನ್ ಸ್ಥಾನದಲ್ಲಿತ್ತು.ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿಆರ್ಥಿಕ ಸ್ಥಿತಿ ನಾಲ್ಕನೇ ಸ್ಥಾನಕ್ಕಿಳಿದಿದೆ.ಮುಂದಿನ ನಾಲ್ಕು ವರ್ಷದಲ್ಲಿ ಕಡೇ ಸ್ಥಾನಕ್ಕಿಳಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದರು.
ಆರ್ಥಿಕ ಪರಿಸ್ಥಿತಿ ನೆಲಕಚ್ಚಿದೆ: ಹರಿಕೃಷ್ಣ
ಕಿಯೋನಿಕ್ಸ ನಿಗಮದ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ,ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಆರ್ಥಿಕ ಪರಿಸ್ಥಿತಿ ನೆಲಕಚ್ಚಿದೆ ಪರಿಣಾಮವಾಗಿ ಎರಡು ಡಿಜಿಟ್ ನಲ್ಲಿದ್ದ ತರಕಾರಿ ಸಹಿತ ದಿನಬಳಕೆಯ ವಸ್ತುಗಳ ಬೆಲೆ ಈಗ ಮೂರು ಡಿಜಿಟ್ ಗೇರಿದೆ ಎಂದರು.ಪಂಚ ಗ್ಯಾರಂಟಿಯಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತುಹೋಗಿದೆ,ಅಲ್ಪಸಂಖ್ಯಾತರಿಗೆ 623 ಕೋ.ರೂ.ಅನುದಾನ ಕೊಟ್ಟಿರುವ ಸಿದ್ದರಾಮಯ್ಯ ಸರಕಾರ ನಾರಾಯಣಗುರು ನಿಗಮ ಸಹಿತ ಹಿಂದೂಸಮಾಜದ ಅಭಿವೃದ್ಧಿಗೆ ಖಾಲಿ ಚೊಂಬು ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ ಅವರು ಈ ಬಿಟ್ಟಿಭಾಗ್ಯ ಕಾಂಗ್ರೆಸ್ ನ ಹೊಸತಳಿಯಾಗಿದ್ದು ಇದು ಅತ್ಯಂತಾಪಾಯಕಾರಿಯಾಗಿದೆ ಎಂದರು.
ಈ ಹಿಂದಿನ ಚುನಾವಣೆಗಳೆಲ್ಲಾ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಮೌಲ್ಯಧಾರಿತ,ಸಿದ್ದಾಂತದ ಆಧಾರದಲ್ಲಿ ನಡೆಯುತಿತ್ತು.ಆದರೆ
ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿತ್ತಿದಜಾತಿವಾದ,ಕೋಮುವಾದ ರಾಜಕಾರಣಕ್ಕೆ ಅವಕಾಶವಿಲ್ಲ ಎಂಬುದನ್ನು ಉಭಯ ಜಿಲ್ಲಡಯಲ್ಲು ಜನತೆ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿ
ಪ್ರೇಮಾನಂದ ಶೆಟ್ಟಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ಬಂಟ್ವಾಳ ಕ್ಷೇತ್ರದ ಪ್ರಭಾರಿ ಪೂಜಾ ಪೈ,
ಪಕ್ಷದ ಮುಖಂಡರಾದ ಸುಲೋಚನಾ ಜಿ.ಕೆ.ಭಟ್, ರಾಮದಾಸ್ ಬಂಟ್ವಾಳ,ದೇವದಾಸ ಶೆಟ್ಟಿ,ವಿಕಾಸ್ ಪುತ್ತೂರು,ದೇವಪ್ಪ ಪೂಜಾರಿ,ತುಂಗಪ್ಪ ಬಂಗೇರ,ರವೀಂದ್ರಕಂಬಳಿ,ಮಾಧವ ಮಾವೆ,ಪ್ರಭಾಕರ ಪ್ರಭು,ಪುರುಷೋತ್ತಮ ಶೆಟ್ಟಿ,ಮೋನಪ್ಪ ದೇವಸ್ಯ,ರೋನಾಲ್ಡ್ ಡಿಸೋಜ,ಗೋವಿಂದ ಪ್ರಭು,ವಜ್ರನಾಭ ಕಲ್ಲಡ್ಕ, ಪುರುಷೋತ್ತಮ ಸಾಲಿಯಾನ್,ಆನಂದ ಶಂಭೂರು,ಪುಷ್ಪರಾಜ್ ಶೆಟ್ಟಿ,ಗಣೇಶ್ ರೈ ಮಾಣಿ,ದಿನೇಶ್ ಭಂಡಾರಿ,ಸೀಮಾ ಮಾಧವ,ಹರ್ಷಿನಿ ಪುಪ್ಪಾನಂದ,ಕೇಶವ ದೈಪಲ,ಸಂತೋಷ್ ರಾಯಿಬೆಟ್ಟು,ಯಶೋಧರ ಕರ್ಬೆಟ್ಟು, ಶ್ರೀಧರ ಶೆಟ್ಟಿ ಪುಳಿಂಚ,ರತ್ನಕುಮಾರ್ ಚೌಟ,ಗೀತಾ ಚಂದ್ರಶೇಖರ ಮೊದಲಾದವರಿದ್ದರು.
ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್ ಸ್ವಾಗತಿಸಿದರು.ಪ್ರ.ಕಾರ್ಯದರ್ಶಿ ಡೊಂಬಯ ಅರಳ ವಂದಿಸಿದರು.ಇನ್ನೋರ್ವ ಪ್ರ.ಕಾರ್ಯದರ್ಶಿ ರವೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.