ನುಡಿನಮನ, ಪ್ರತಿಭಾ ಪುರಸ್ಕಾರ ಹಾಗೂ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ
ಬಂಟ್ವಾಳ: ಸ್ಮಾರ್ಟ್‌ಗೈಸ್ ಕೈಕಂಬ, ಬಿ.ಸಿ.ರೋಡು ಮತ್ತು ಅಂಬೇಡ್ಕರ್‌ಯುವ ವೇದಿಕೆ ಬಂಟ್ವಾಳ ಇದರ ಆಶ್ರಯದಲ್ಲಿ ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇವರ ಸಹಭಾಗಿತ್ವದಲ್ಲಿ ಸಮಾಜಮುಖಿ ಚಿಂತಕ, ಅಂಬೇಡ್ಕರ್‌ವಾದಿ ದಿ. ರಾಜಪಲ್ಲಮಜಲು ಅವರ ೩ನೇ ವರ್ಷದ ಸ್ಮರಣಾರ್ಥ ನುಡಿನಮನ, ಪ್ರತಿಭಾ ಪುರಸ್ಕಾರ ಹಾಗೂ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಎಸ್‌ಜಿಕೆ ಟ್ರೋಪಿ ೨೦೨೪ ಬಿ.ಸಿ. ರೋಡಿನ ಸ್ಪರ್ಶಾ ಕಲಾಮಂದಿರಲ್ಲಿ ನಡೆಯಿತು.

ಮಾಜಿ ಸಚಿವ ಬಿ. ರಮಾನಾಥೈ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ಒಳ್ಳೆಯದು ಮಾಡಬೇಕೆನ್ನುವ ಆಶಯವನ್ನು ರಾಜಪಲ್ಲಮಜಲು ಹೊಂದಿದ್ದರು, ಜಾತಿ, ಧರ್ಮ, ಭಾಷೆಯನ್ನು ಮೀರಿ ಮಾನವರಾಗಿ ಬದುಕಬೇಕು ಎನ್ನುವ ಕಲ್ಪನೆಯೊಂದಿಗೆ ಬಾಳಿದವರು ಎಂದರು.
ರಾಜ ಪಲ್ಲಮಜಲು ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿದವರು, ಅವರ ಮಕ್ಕಳು ಕೂಡ ಅವರ ಹಾದಿಯಲ್ಲಿಯೇ ಸಾಗುತ್ತಿರುವುದು ಅಭಿನಂದನೀಯ ಎಂದರು.
ಕಾರ್ಯಕ್ರಮದಲ್ಲಿ ಮರೆಯಲಾಗದ ಮಹಾಚೇತನ ರಾಜಪಲ್ಲಮಜಲು ಪುಸ್ತಕ ಬಿಡುಗಡೆ ಗೊಳಿಸಲಾಯಿತು. ವಕೀಲೆ ಶೈಲಜಾ ರಾಜೇಶ್ ಅತಿಥೊಯಾಗಿ ಭಾಗವಹಿಸಿದ್ದರು.ಸ್ಮಾರ್ಟ್ ಗೈಸ್ ಕೈಕಂಬದ ಅಧ್ಯಕ್ಷ ಪ್ರೀತಿರಾಜ್ ದ್ರಾವಿಡ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜದಲ್ಲಿ ಇಂದು ನಾವು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಜೀವನ ನಡೆಸಲು ನನ್ನ ತಂದೆ ದಿ. ರಾಜಪಲ್ಲಮಜಲು ಅವರೇ ಪ್ರೇರಣೆ. ಅವರು ಹಾಕಿಕೊಟ್ಟ ಹಾದಿಯೇ ನಮಗೆ ಶ್ರೀರಕ್ಷೆ ಎಂದರು.
ಇದೇ ವೇಳೆ ಕೀಡಾ ಕ್ಷೇತ್ರದ ಸಾಧಕರಾದ ಸೃಜನ್ ಕೃಷ್ಣಪುರ, ಕಿಶನ್ ದ್ರಾವಿಡ್, ನಳಿನಾಕ್ಷಿ, ಪ್ರೀತಂ ಶಾಶ್ವತ್ ರಾಜ್ ಅವರನ್ನು ಸನ್ಮಾನಿಸಲಾಯಿತು.ಅಮೆಚೂರು ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಬೇಬಿ ಕುಂದರ್, ವೇಣೂರು ಪೊಲೀಸ್ ಠಾಣೆಯ ಎಎಸೈ ಲೋಕೇಶ್ ಮೊಡಂಕಾಪು, ಪಿಡಬ್ಲ್ಯುಡಿ ಗುತ್ತಿಗೆದಾರ ಅಶೋಕ್ ಕುಮಾರ್ ಭಂಡಾರಿಬೆಟ್ಟು, ಬಂಟ್ವಾಳ ತಾಲೂಕು ಮರಾಟಿ ಸೇವಾ ಸಂಘದ ಸಂಚಾಲಕ ಕೇಶವ ನಾಯ್ಕ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಸ್ಪರ್ಶಾ ಕಲಾ ಮಂದಿರದ ಮಾಲಕ ಸುಭಾಶ್ಚಂದ್ರ ಜೈನ್, ಪುಟ್ಟರಂಗನಾಥ್ ಪ್ರಮುಖರಾದ ಸೇಸಪ್ಪ ಮಾಸ್ಟರ್, ಬಾಬು ಮಾಸ್ಟರ್, ಶ್ರೀನಿವಾಸ್ ಮಿಜಾರ್, ಶೇಖರ್, ಶಶಿ ಕುಮಾರ್, ಹೊನ್ನಪ್ಪ ಕುಂದರ್, ವೆಂಕಣ್ಣ ಕಯ್ಯೂರು, ಶ್ರೀನಿವಾಸ ಅರ್ಬಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಮೋಹನ್ ಬಡಗಬೆಳ್ಳೂರು, ಕಾರ್ಯದರ್ಶಿ ಪ್ರೇಮರಾಜ್ ದ್ರಾವಿಡ್, ಜೊತೆಕಾರ್ಯದರ್ಶಿಗಳಾದ ಪೂರ್ಣೆಶ್ ಕೊಯ್ಯುರು, ಸಂಪತ್ ಕಕ್ಕೆಪದವು, ಕೋಶಾಧಿಕಾರಿ ಪುಷ್ಪರಾಜ್ ದ್ರಾವಿಡ್, ಕ್ರೀಡಾ ಕಾರ್ಯದರ್ಶಿಗಳಾದ ಮಂಜುನಾಥ ಉರ್ವಸ್ಟೋರ್, ಸಂಪತ್ ವಗ್ಗ, ಶಿವಪ್ರಸಾದ್ ನಿಡುವಾಳೆ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಅನುರಾಧ ಮಿಜಾರ್. ಪುನೀತ್ ರಾಜ್ ದ್ರಾವಿಡ್, ಪ್ರಶಾಂತ್ ಕಂಕನಾಡಿ ಹಾಜರಿದ್ದರು.
ಸಂಘಟನೆಯ ಉಪಾಧ್ಯಕ್ಷ ವೆಂಕಟೇಶ್ ಕೃಷ್ಣಪುರ ಸ್ವಾಗತಿಸಿದರು. ಪೂರ್ಣಿಮ ಪುಸ್ತಕ ಪರಿಚಯಿಸಿದರು. ಪ್ರವಿಣ್ ಸೂರ್ಯ ಹೊಸಂಗಡಿ ವಂದಿಸಿದರು. ಚಂದ್ರಪ್ಪ ಮಾಸ್ಟರ್ ಮದ್ದಡ್ಕ ಕಾರ್ಯಕ್ರಮ ನಿರೂಪಿಸಿದರು.