ಗಾಳಿ,ಮಳೆಗೆ ಎರಡು ಮನೆಗಳಿಗೆ ಹಾನಿ
ಬಂಟ್ವಾಳ: ಕಳೆದ ಎರಡ್ಮೂರು ದಿನಗಳಿಂದ ಬಂಟ್ವಾಳದಾದ್ಯಂತ ಬಿರುಸಿನ ಮಳೆಯಾಗುತ್ತಿದ್ದು,ಮಂಗಳವಾರ ರಾತ್ರಿ ಸುರಿದ ಗಾಳು,ಮಳೆಗೆ ಎರಡುಮನೆಗಳಿಗೆ ಹಾನಿಯಾಗಿದೆ.ತುಂಬೆ ಗ್ರಾಮದ ನಳಿನಾಕ್ಷಿ ಎಂಬವರ ಮನೆಗೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದರೆ,ಕಳ್ಳಿಗೆ ಗ್ರಾಮದ ನವೀನ್ ಎಂಬವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿರುತ್ತದೆ.

ಸ್ಥಳೀಯ ಪಂಚಾಯತ್ ಪಿಡಿಒಗಳು ಸ್ಥಳ ಪರಿಶೀಲಿಸಿ ನಷ್ಟದ ಬಗ್ಗೆ ಅಂದಾಜಿಸಿದ್ದಾರೆ.
ಡಿ.ಸಿ.ಗೆ ಮನವಿ
ಈ ನಡುವೆ ಕಳೆದ ವಾರ ತಾಲೂಕಿನ ಇರ್ವತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀಸಿದ ಸುಂಟರಗಾಳಿಯಿಂದಾಗಿ ಅಪಾರಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಸಂತ್ರಸ್ಥರಿಗೆ ತಕ್ಷಣ ಪರಿಹಾರ ನೀಡುವಂತೆ ಜಿ.ಪಂ.ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಸುಂಟರಗಾಳಿಯಿಂದಾಗಿ ಇರ್ವತ್ತೂರು ಗ್ರಾಮವೊಂದರಲ್ಲೇ ಹಲವಾರು ಕಡೆ ತೋಟಗಳಲ್ಲಿ ಅಡಿಕೆ ,ತೆಂಗು ಸಹಿತ ವಿವಿಧ ಜಾತಿಯ ಮರಗಳು ಮುರಿದು ಬಿದ್ದು ಹಾನಿಯಾಗಿದೆ.ರಬ್ಬರ್ ತೋಟಗಳಿಗೂ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.ಎರಡು ಮನೆಗಳಿಗೆ ಸಿಡಿಲು ಬಡಿದು ಹಾನಿಯಾಗಿದ್ದು,ಅವರಿಗೂ ಪರಿಹಾರ ನೀಡಲು ಸಂಬಂಧಪಟ್ಟ ಇಲಾಖೆಗೆ ಸೂಚಿಸುವಂತೆ ಅವರುಮನವಿಯಲ್ಲಿಒತ್ತಾಯಿಸಿದ್ದಾರೆ.