ಒಂದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ಕೊಡುಗೆ
ವಿಟ್ಲ: ವಿಟ್ಲದ ಕ ಜಿ ಪಂ ಹಿರಿಯ ಪ್ರಾಥಮಿಕ ಶಾಲೆ ಕೆಲಿಂಜ ಇಲ್ಲಿಗೆ ಮುತ್ತೂಟ್ ಫೈನಾನ್ಸ್ ಮಂಗಳೂರು ಇವರು ಒಂದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ಕೊಡುಗೆ ನೀಡುವ ಕಾರ್ಯಕ್ರಮ ಶಾಲೆಯಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ ಜಿ ಉದ್ಘಾಟಿಸಿದರು. ಮುತ್ತೂಟ್ ಪುತ್ತೂರು ಕ್ಲಸ್ಟರ್ ಮ್ಯಾನೇಜರ್ ಸಂದೇಶ್ ಶೆಣೈ, ಸಿ ಎಸ್ ಆರ್ ಮ್ಯಾನೇಜರ್ ಪ್ರಸಾದ್ ಕುಮಾರ್, ರಿಸೋರ್ಸ್ ಮ್ಯಾನೇಜರ್ ಲತೀಶ್, ರೀಜನಲ್ ಮಾರ್ಕೆಟಿಂಗ್ ಮ್ಯಾನೇಜರ್ ಸುರಕ್ಷಿತ್ ರೈ, ಬಿ ಸಿ ರೋಡ್ ಶಾಖಾ ಮ್ಯಾನೇಜರ್ ಅಮಿತ ಎಂ, ವಿಟ್ಲ ಶಾಖಾ ಮ್ಯಾನೇಜರ್ ಪ್ರತಿಮಾ ಕಾಮತ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪೆಲತ್ತಡ್ಕ, ಕಾರ್ಯದರ್ಶಿ ಸಂತೋಷ್ ಶೆಟ್ಟಿ ಸೀನಾಜೆ ಸಿ ಆರ್ ಪಿ ಜ್ಯೋತಿ ಇ ಸಿ ಒ ಸುಜಾತ ಎಸ್ ಡಿ ಎಂ ಸಿ ಅಧ್ಯಕ್ಷೆ ಜಯಂತಿ ಅತಿಥಿಗಳಾಗಿ ಭಾಗವಹಿಸಿದ್ದರು.
ಶಿಕ್ಷಕಿ ರೋಶನಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ತಿಮ್ಮಪ್ಪ ನಾಯ್ಕ ವಂದಿಸಿದರು. ಶಿಕ್ಷಕಿ ಉಷಾ ಸುವರ್ಣ ನಿರೂಪಿಸಿದರು.
ಸಹ ಶಿಕ್ಷಕರು, ಮಕ್ಕಳು ಮತ್ತು ಪೋಷಕರು ಉಪಸ್ಥಿತರಿದ್ದರು