ಮಂಗಳೂರು: ಖಾಸಗಿ ಬಸ್ ಕಂಡಕ್ಟರ್ ಭರತ್ ರಾಜ್ ಎಂಬಾತನನ್ನು ಪ್ರೀತಿಸಿ ಮೈಸೂರಿನಲ್ಲಿ ಹಿಂದೂ ಧಾರ್ಮಿಕ ಪದ್ಧತಿಯಂತೆ ಮದುವೆಯಾಗಿರುವ ಉಳ್ಳಾಲ ನಿವಾಸಿ ಇನ್ಶಾ ಖಲೀಲ್ ಪತ್ತೆಗೆ ಆಕೆಯ ಹೆತ್ತವರು ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.
ಕೆಲವು ವರ್ಷಗಳಿಂದ ಇನ್ಶಾ ಖಲೀಲ್ ತಾನು ನಿತ್ಯ ಪ್ರಯಾಣಿಸುತ್ತಿದ್ದ ಬಸ್ಸಿನ ಕಂಡಕ್ಟರ್ ಭರತ್ ರಾಜ್ ನನ್ನು ಪ್ರೀತಿಸುತ್ತಿದ್ದಳು. ಆತನ ಜೊತೆ ಕೆಲವು ದಿನಗಳ ಹಿಂದೆ ಮನೆ ತೊರೆದು ಪರಾರಿಯಾಗಿದ್ದ ಇನ್ಶಾ ಮೈಸೂರಿನಲ್ಲಿ ಮದುವೆಯೂ ಆಗಿ ಮಾಧ್ಯಮಗಳಿಗೆ ಪತ್ರ ಬರೆದಿದ್ದಳು.
ಆದರೆ ಆಕೆಯ ಹೆತ್ತವರು ಭರತ್ ರಾಜ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ನೀಡಿದ್ದಾರೆ. ಇದೀಗ ಆಕೆಯನ್ನು ಹುಡುಕಿ ಕೊಡುವಂತೆ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.

