ಬಂಟ್ವಾಳ:ಇಲ್ಲಿನ ಬಂಟ್ವಾಳದಲ್ಲಿ ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಬಿ.ಜನಾರ್ಧನ ಪೂಜಾರಿ ಮನೆಗೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಶನಿವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ರಾಜ್ಯ ಸಕರ್ಾರ ಕೈಗೊಂಡ ನಾಲ್ಕು ಜನಪ್ರಿಯ ಯೋಜನೆಗಳ ಪೈಕಿ ಮೂರು ಯೋಜನೆ ಕೇವಲ 100 ದಿನಗಳಲ್ಲೇ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಬಗ್ಗೆ ಪೂಜಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟು ನೇತ್ರಾವತಿ ನದಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಜಕ್ರಿಬೆಟ್ಟು-ನರಿಕೊಂಬು ಸಂಪರ್ಕ ಸೇತುವೆ ಮತ್ತು ಕಿಂಡಿ ಅಣೆಕಟ್ಟೆ ಕಾಮಗಾರಿಯನ್ನು ಸಚಿವರು ಭೇಟಿ ನೀಡಿ ವೀಕ್ಷಿಸಿದರು. ಕಾಂಗ್ರೆಸ್ ಮುಖಂಡರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಪ್ರಕಾಶ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಅಬ್ಬಾಸ್ ಆಲಿ, ಸುಧಾಕರ ಶೆಣೈ ಖಂಡಿಗ, ಜಗದೀಶ ಕುಂದರ್, ಲೋಲಾಕ್ಷ ಶೆಟ್ಟಿ, ಸೀತಾರಾಮ, ಮಧುಸೂಧನ ಶೆಣೈ ಮತ್ತಿತರರು ಇದ್ದರು.