ಬಂಟ್ವಾಳ: ತಾಲೂಕಿನ ಗೋಳ್ತಮಜಲು ಸರಕಾರಿ ಪ್ರೌಢಶಾಲೆಯಲ್ಲಿ 77 ಸ್ವಾತಂತ್ರ್ಯ ದಿನಾಚರಣೆ ಮತ್ತುವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.


  ಶಾಲಾ ಎಸ್‌.ಡಿ.ಎಂ.ಸಿ ಕಾರ್ಯಾಧ್ಯಕ್ಷರಾದ ಚಂದ್ರಶೇಖರ ಟೈಲರ್ ರವರು ಧ್ವಜಾರೋಹಣವನ್ನು ನೆರವೇರಿಸಿದರು,ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ಚಿತ್ರಕಲಾ ಶಿಕ್ಷಕರಾದ ಸತ್ಯ ಶಂಕರ  ಬಿ, ಅತಿಥಿ ಶಿಕ್ಷಕರಾದ  ಪವಿತ್ರಾ ಬಿ ಹಾಗೂ  ಅಶ್ವಿತಾ ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.


ನಿವೃತ್ತ ಶಿಕ್ಷಕರಾದ ನಾರಾಯಣಗೌಡ ಮುಖ್ಯ ಶಿಕ್ಷಕಿಯಾದ  ವಿದ್ಯಾಲತಾ, ಗೋಳ್ತಮಜಲು ಗ್ರಾಮಪಂಚಾಯತ್ ಸದಸ್ಯರಾದ ಪುರುಷೋತ್ತಮ, ನಳಿನಾಕ್ಷಿ, ಶ್ ಸರೋಜಿನಿ,ವೀರಕಂಭ ಗ್ರಾಮ ಪಂಚಾಯಿತ್ ಸದಸ್ಯರಾದ  ಜಯಂತಿ, ಎಸ್. ಡಿ. ಎಂ .ಸಿ  ಸದಸ್ಯರಾದ ಮೋನಪ್ಪ ದೇವಸ್ಯ, ಬಾಲಕೃಷ್ಣ  ಕೊಟ್ಟಾರಿ, ಸ್ಥಳೀಯರಾದ ಸುಂದರ ಶೆಟ್ಟಿ  , ಸತ್ಯಸಾಯಿ ಸೇವಾ ಸಂಸ್ಥೆಯ ನಾರಾಯಣ ರಾವ್ ಉಪಸ್ಥಿತರಿದ್ದರು.

ಎಸ್.ಡಿ.ಎಂ.ಸಿ ಸದಸ್ಯರು,ಪೋಷಕರು, ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.ಶಿಕ್ಷಕಿ  ಸುನೀತಾ ಬಿ. ಪ್ರಾಸ್ತವಿಸಿದರು,ಶಿಕ್ಷಕಿ  ಸುಜಾತ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕರಾದ  ಶಂಕರ್ ಪಾವಸ್ಕರ್  ಸ್ವಾಗತಿಸಿ,ಶಿಕ್ಷಕರಾದ ಚಿದಾನಂದ ಕೆ ವಂದಿಸಿದರು, ಶಿಕ್ಷಕರಾದ ಸತ್ಯಶಂಕರ್ ಕಾರ್ಯಕ್ರಮ ನಿರೂಪಿಸಿದರು 

By suddi9

Leave a Reply

Your email address will not be published. Required fields are marked *