ಮೂಡುಬಿದರೆ : ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ, ಚಿತ್ರದುರ್ಗದಲ್ಲಿ ನವೆಂಬರ್ 17 ರಿಂದ 19, 2014 ರವರೆಗೆ ನಡೆದ ಪದವಿಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು 38 ಪದಕ, 11 ಚಿನ್ನದ ಪದಕ, 13 ಬೆಳ್ಳಿ ಪದಕ ಮತ್ತು 14 ಕಂಚಿನ ಪದಕ ಪಡೆದು 27 ಕ್ರೀಡಾಪಟುಗಳು ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ವಿಭಾಗದಲ್ಲಿ ಆಳ್ವಾಸ್ ಪ.ಪೂ. ಕಾಲೇಜಿನ ಪ್ರಕಾಶ್ ಪಿ. (1500 ಮೀ, – ದ್ವಿತೀಯ), ಸಂದೇಶ್ (ತ್ರಿವಿಧ ಜಿಗಿತ ಪ್ರಥಮ), ವಿವೇಕ್ ಅಡಿಗ (ಡಿಸ್ಕಸ್ ತ್ರೋ – ಪ್ರಥಮ), ಅಮರನಾಥ್ (400ಮೀ ಹರ್ಡಲ್ಸ್ -ದ್ವಿತೀಯ), ವಿನಾಯಕ್ ಗಾಡಿ(5000ಮೀ, ಗುಡ್ಡಗಾಡು ಓಟ – ಪ್ರಥಮ, ದ್ವಿತೀಯ), ರೋಹಿತ್(100ಮೀ – ದ್ವಿತೀಯ), ನಿತಿನ್ ಕೆ.(ಎತ್ತರ ಜಿಗಿತ – ತೃತೀಯ), ಶಿವಾನಂದ(3000ಮೀ, ಗುಡ್ಡಗಾಡು ಓಟ – ತೃತೀಯ, ನಾಲ್ಕನೇ ಸ್ಥಾನ), ಸುದರ್ಶನ್ (800ಮೀ – ದ್ವಿತೀಯ), ದೀರಜ್ (ಉದ್ದ ಜಿಗಿತ – ಪ್ರಥಮ), ಗವಿಸ್ವಾಮಿ (ಹ್ಯಾಮರ್ ತ್ರೊ – ಪ್ರಥಮ), ಕೇಶವನ್ (ಹ್ಯಾಮರ್ ತ್ರೊ – ದ್ವಿತೀಯ), ಕಿಶನ್ (110ಮೀ ಹರ್ಡಲ್ಸ್ – ದ್ವಿತೀಯ), ಅನಿಲ್ ಕುಮಾರ್ (ಗುಡ್ಡಗಾಡು ಓಟ – ಆರನೇ ಸ್ಥಾನ), 4ಥ400 ರಿಲೇ ತೃತೀಯ, 4*100 ರಿಲೇ ತೃತೀಯ ಹಾಗೂ ಬಾಲಕಿಯರ ವಿಭಾಗದಲ್ಲಿ ಅನುಷಾ ಪೂಜಾರಿ (ತ್ರಿವಿಧ ಜಿಗಿತ – ಪ್ರಥಮ), ಐಶ್ವಯರ್ಾ ಬಿ. (ಉದ್ದಜಿಗಿತ, ತ್ರಿವಿಧ ಜಿಗಿತ – ಪ್ರಥಮ, ದ್ವಿತೀಯ), ಐಶ್ವಯರ್ಾ ಪಿ. (ಡಿಸ್ಕಸ್ ತ್ರೊ – ದ್ವಿತೀಯ), ಸ್ವರ್ಣ ನಾಯಕ್(ಡಿಸ್ಕಸ್ ತ್ರೊ -ತೃತೀಯ), ಪ್ರಣತಿ (400ಮೀ ಹರ್ಡಲ್ಸ್ -ತೃತೀಯ), ದೀಕ್ಷಾ (ಗುಡ್ಡಗಾಡು ಓಟ, 5000ಮೀ – ಪ್ರಥಮ, ತೃತೀಯ), ಸಿಮಿ ಎನ್.ಎಸ್. (100ಮೀ – ಪ್ರಥಮ), ಚೈತ್ರ (ಹೈಜಂಪ್- ದ್ವಿತೀಯ), ಅಪರ್ಿತಾ ಹೆಚ್.ಎಸ್. (3ಕಿ.ಮೀ ನಡಿಗೆ-ದ್ವಿತೀಯ), ಪವಿತ್ರ (ಪೋಲ್ವಾಲ್ಟ್ ಪ್ರಥಮ), ಚಿನ್ನವ್ವ (ಶಾಟ್ಪುಟ್ – ತೃತೀಯ), ಶ್ರುತಿ ಹೆಚ್.ಡಿ. (ಗುಡ್ಡಗಾಡು ಓಟ – ದ್ವಿತೀಯ), ಪ್ರಿಯಾಂಕ ಹೆಚ್.ಬಿ (ಗುಡ್ಡಗಾಡು ಓಟ – ನಾಲ್ಕನೇ ಸ್ಥಾನ), ಶ್ರದ್ಧಾ ಶೆಟ್ಟಿ (ಗುಡ್ಡಗಾಡು ಓಟ ಆರನೇ ಸ್ಥಾನ), 4ಥ100 ರಿಲೇ ಪ್ರಥಮ, 4ಥ400 ರಿಲೇ ದ್ವಿತೀಯ ಪದಕವನ್ನು ಪಡೆದರು.
