ಕಡೇಶಿವಾಲಯ ರೋಟರಿ ಸಮುದಾಯದ ದಳ ನೂತನ ಪದಾಧಿಕಾರಿಗಳ ಪದಗ್ರಹಣ
ಬಂಟ್ವಾಳ: ರೋಟರಿ ಸಮುದಾಯದ ದಳ ಕಡೇಶಿವಾಲಯ ಇದರ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ರೋಟರಿ ಭವನದಲ್ಲಿ ನಢಯಿತು.

ರೋಟರಿ ಕ್ಲಬ್ ಬಂಟ್ವಾಳ ಇದರ ಅಧ್ಯಕ್ಷರಾದ ರೊ.ಪಿಎಚ್ ಎಫ್ ಪ್ರಕಾಶ್ ಬಾಳಿಗ ಇವರು ನೆರವೇರಿಸಿ ಶುಭಹಾರೈಸಿದರು. ಬಂಟ್ವಾಳ ರೋಟರಿ ಕ್ಲಬ್ ಕಾರ್ಯದರ್ಶಿ ರೊ.ಸದಾಶಿವ ಬಾಳಿಗ ,ಸಾಹಿತಿ ವಿಂಧ್ಯಾ ಎಸ್. ರೈ , ಬಂಟ್ವಾಳ ರೋಟರಿ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು, ದಳದ ನಿಕಟ ಪೂರ್ವ ಅಧ್ಯಕ್ಷರಾದ ಯೋಗೀಶ್ ನಾಯ್ಕ್ ಡಿ., ಕಾರ್ಯದರ್ಶಿ ಜಹೀರ್ ಪ್ರತಾಪನಗರ ಉಪಸ್ಥಿತರಿದ್ದರು .
ಸಲಹಾ ಸಮಿತಿಯ ಚೇರ್ಮನ್ ಕೆ.ಕೆ.ಶೆಟ್ಟಿ ಕುರುಂಬ್ಲಾಜೆ ಸ್ವಾಗತಿಸಿ, ನೂತನ ಅಧ್ಯಕ್ಷರಾದ ಕಿಶೋರ್ ಕುಮಾರ್ ಬಿ. ವಂದಿಸಿದರು,ಸದಸ್ಯ ನವೀನ್ ನಾಯ್ಕ್ ಪಿಳಿಂಗಳ ಕಾರ್ಯಕ್ರಮ ನಿರೂಪಿಸಿದರು.