ಮಂಗಳೂರು: ಬಸ್ಕಂಡಕ್ಟರ್ ಭರತ್ ರಾಜ್ ಜೊತೆ ಉಳ್ಳಾಲದ ಬಿಬಿಎಂ ವಿದ್ಯಾರ್ಥಿನಿ ಇನ್ಷಾ ಖಲೀಲ್ ಪರಾರಿಯಾಗಿ ಮೈಸೂರಿನಲ್ಲಿ ವಿವಾಹಬಂಧನಕ್ಕೊಳಗಾದ ಘಟನೆಯ ಬಗ್ಗೆ ಕೆಲವು ಕಿಡಿಗೇಡಿಗಳು ವಾಟ್ಸ್ಅಪ್ನಲ್ಲಿ ವಿಕೃತ ಪ್ರಚಾರದಲ್ಲಿ ತೊಡಗಿದ್ದಾರೆ. ಕನ್ನಡದ ಪ್ರಮುಖ ಸುದ್ದಿವಾಹಿನಿ ಟಿವಿ9 ಇದರ ವರದಿಯ ಸ್ಕ್ರೀನ್ ಶಾಟ್ ತೆಗೆದು ಇನ್ಷಾ ಖಲೀಲ್ ಹೆಸರಿನ ಮುಂಭಾದಗಲ್ಲಿ ಇದ್ದ ಬರಹವನ್ನು ಅಳಿಸಿ `ಆತ್ಮಹತ್ಯೆ’ ಎಂದು ಬರೆದಿದ್ದಾರೆ. ಥಟ್ಟಣೆ ನೋಡುವಾಗ ಸಾಕಷ್ಟು ಗೊಂದಲ ಉಂಟಾಗುತ್ತಿದ್ದು ಆದರೆ ಅಕ್ಷರದ ವ್ಯತ್ಯಾಸಗಳನ್ನು ಗಮನಿಸಿದಾಗಲೇ ಇದು ಕಿಡಿಗೇಡಿಗಳ ಚತುರ ಕಿಡಿಗೇಡಿ ಬುದ್ಧಿ ಎಂಬುದು ಬೆಳಕಿಗೆ ಬರುತ್ತದೆ.

insha1

jodi-hakki
ವಾಟ್ಸ್ಆಪ್ನಲ್ಲಿ ಬರುತ್ತಿರುವ ಈ ಚಿತ್ರದಿಂದ ಸಾಮಾಜಿಕ ತಾಣಗಳಲ್ಲಿ ಬಹಳ ಚರ್ಚೆಯೂ ನಡೆಯುತ್ತಿದ್ದು, ಕೊನೆಗೆ ಸಂಬಂಧಪಟ್ಟ ಮಾಧ್ಯಮದವರಲ್ಲಿ ವಿಚಾರಿಸಿದಾಗ ಇದು ಕೃತಕವಾಗಿ ಸೃಷ್ಟಿಸಲಾದ ಇಮೇಜ್ ಎಂಬ ಅಂಶ ಗೊತ್ತಾಗಿದೆ. ಖಲೀಲ್ ಅನ್ಯಧರ್ಮೀಯನನ್ನು ಮದುವೆಯಾಗಿರುವುದರಿಂದ ಕೆಂಡವಾಗಿರುವ ಕೆಲವು ಅವಿವೇಕಿಗಳು ಈ ರೀತಿ ಇಮೇಜ್ ಸೃಷ್ಟಿಸಿ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂಬ ಅಂಶ ಬಯಲಾಗಿದೆ. ಆದರೆ ದಂಪತಿ ನೆಮ್ಮದಿಯಿಂದ ಇದ್ದಾರೆ ಎಂಬುದು ತಿಳಿದುಬಂದಿದೆ.

By suddi9

Leave a Reply

Your email address will not be published. Required fields are marked *