ಬಿ.ಸಿ.ರೋಡಿನಲ್ಲಿ ಶಕ್ತಿ ಯೋಜನೆಗೆ ಚಾಲನೆ ಸ್ಮಾಟ್ ð ಕಾಡ್ ð ಸಿಗುವ ತನಕ ಗುಉತಿನ ಚೀಟಿ ಬಳಕೆ
ಬಂಟ್ವಾಳ:ರಾಜ್ಯದಲ್ಲಿ ಸಾಮಾನ್ಯ ಮತ್ತು ವೇಗದೂತ ಸರ್ಕಾರಿ ಬಸ್ಸಿನಲ್ಲಿ ರಾಜ್ಯದೆಲ್ಲೆಡೆ ಮಹಿಳೆೆಯರು ಉಚಿತ ಪ್ರಯಾಣಿಸಲು ಸರ್ಕಾರವು ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆ ಜಾರಿಗೊಳಿಸಿದೆ. ಆರು ವರ್ಷದಿಂದ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದ್ದು, ಸ್ಮಾರ್ಟ್ ಕಾರ್ಡ್ ಸಿಗುವ ತನಕ ಆಧಾರ್ ಕಾರ್ಡ್ ಮತ್ತಿತರ ಮುಖಚಿತ್ರ ಸಹಿತ ವಿಳಸ ಹೊಂದಿರುವ ಗುರುತಿನ ಚೀಟಿ ಬಳಸಬಹುದು ಎಂದು ತಹಶೀಲ್ದಾರ್ ವಿ.ಎಸ್.ಕೂಡಲಗಿ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡಿನಲ್ಲಿ ‘ಶಕ್ತಿ ‘ಯೋಜನೆಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು. ಮಾಜಿ ಸಾರಿಗೆ ಸಚಿವ ಬಿ.ರಮಾನಾಥ ರೈ ಮಾತನಾಡಿ, ಸರ್ಕಾರದ ದಿಟ್ಟ ನಿರ್ಧಾರದಿಂದ ಮಹಿಳೆಯರಿಗೆ ಉಚಿತ ಪ್ರಯಾಣದ ಮೂಲಕ ಅವರ ದೈನಂದಿನ ಚಟುವಟಿಕೆಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು. ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಟ್, ಬಂಟ್ವಾಳ ಪುರಸಭೆ ಅಧ್ಯಕ್ಷ ಮಹಮ್ಮದ್ ಶರೀಫ್, ವಿಭಾಗೀಯ ಲೆಕ್ಕಪತ್ರಾಧಿಕಾರಿ ಆಶಾಲತಾ ಇದ್ದರು.
ಘಟಕ ವ್ಯವಸ್ಥಾಪಕ ಶ್ರೀಶ ಭಟ್ ಪ್ರ‍್ರಾಸ್ತಾವಿಕ ಮಾತನಾಡಿದರು. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದೇವೇಂದ್ರ ಗುಡಿಗಾರ್ ಸ್ವಾಗತಿಸಿ, ಸಹಾಯಕ ಸಂಚಾರ ಅಧೀಕ್ಷಕ ಗಣೇಶ್ ಪೈ ವಂದಿಸಿದರು. ಸಹಾಯಕ ಕೆ. ರಮೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.