ಸಿರಿಗುಂಡದಪಾಡಿ: ಬ್ರಹ್ಮಲಿಂಗೇಶ್ವರ ದೇವಸ್ಥಾನ
ಆಕರ್ಷಕ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ
ಬಂಟ್ವಾಳ:ಇಲ್ಲಿನ ಮೂಡುಪಡುಕೋಡಿ ಗ್ರಾಮದ ಸಿರಿಗುಂಡದಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆಯಲಿರುವ ಬ್ರಹ್ಮಕಲಶೋತ್ಸವಕ್ಕೆ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ಗುರುವಾರ ಸಂಜೆ ನಡೆಯಿತು. ಡಾ.ಶಿವಪ್ರಸಾದ್ ಭಟ್ ನೇಸರ ಮತ್ತು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಯು.ಎಸ್.ಚಂದ್ರಶೇಖರ ಭಟ್ ಮೆರವಣಿಗೆಗೆ ಚಾಲನೆ ನೀಡಿದರು.

ರೂ ೨೫ಲಕ್ಷ ವೆಚ್ಚದಲ್ಲಿ ಬ್ರಹ್ಮಲಿಂಗೇಶ್ವರ ದೇವಸ್ಥಾನ ಸಹಿತ ಕುಮಾರ, ಸಿರಿ, ಅಬ್ಬಗ ದಾರಗ ಆದಿ ಆಲಡೆ ಪುನರ್ ನಿರ್ಮಾಣಗೊಂಡಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಮೋಹನ್ ಶೆಟ್ಟಿ ನರ್ವಲ್ದಡ್ಡ ಹೇಳಿದರು.ಚೆಂಡೆ, ನೃತ್ಯ ಭಜನೆ, ಬ್ಯಾಂಡು, ವಾದ್ಯ ಹೊರೆಕಾಣಿಕೆ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯರ ಮಾರ್ಗದರ್ಶನದಲ್ಲಿ ನಡ್ವಂತಾಡಿ ವೇದವ್ಯಾಸ ಪಾಂಗಣ್ಣಾಯ ಮತ್ತು ಪ್ರಧಾನ ಅರ್ಚಕ ಗೋಪಾಲಕೃಷ್ಣ ಆಚಾರ್ಯ ಸನಂಗುಳಿ ಪೌರೋಹಿತ್ಯದಲ್ಲಿ ವಿವಿಧ ವೈಧಿಕ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಇದೇ ವೇಳೆ ನೂತನ ಪ್ರವೇಶ ದ್ವಾರ ವನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರಾ ಉದ್ಘಾಟಿಸಿದರು. ಪಾಕಶಾಲೆ, ಕಚೇರಿ ಮತ್ತು ಮುಖಮಂಟಪ ಲೋಕಾರ್ಪಣೆಗೊಂಡಿತು.
ಆಡಳಿತ ಸಮಿತಿ ಗೌರವಾಧ್ಯಕ್ಷ ಮುರಳೀಧರ ಕೆದಿಲಾಯ ಮಂಗಳೂರು, ಕಾರ್ಯಾಧ್ಯಕ್ಷ ಜಿ.ಕೆ.ಭಟ್ ವಾಮದಪದವು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ ಎಸ್., ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೊರಗ ಶೆಟ್ಟಿ ಬಂಗೇರಕೆರೆ, ಅಧ್ಯಕ್ಷ ಬೂಬ ಸಪಲ್ಯ ಮುಂಡಬೈಲು, ಸಂಚಾಲಕ ಗೋಪಾಲ ಅಂಚನ್ ಆಲದಪದವು, ಪ್ರಮುಖರಾದ ಪ್ರದೀಪ್ ಕುಮಾರ್ ಶೆಟ್ಟಿ ಬೀಯಂತಬೆಟ್ಟು, ಹರ್ಷ ಶೆಟ್ಟಿ ಭಂಡಾರದಬೆಟ್ಟು, ವೆಂಕಪ್ಪ ಮೂಲ್ಯ ಬಂಗೇರಕೆರೆ, ಲೋಕನಾಥ ಶೆಟ್ಟಿ ನರ್ವಲ್ದಡ್ಡ, ದಯಾನಂದ ಎಸ್.ಎರ್ಮೆನಾಡು, ಮಂಜುನಾಥ ಪೂಜಾರಿ ಮುಂಡಬೈಲು, ಗಣೇಶ ಶೆಟ್ಟಿ ಮತ್ತಿತರರು ಇದ್ದರು.