ಆಳ್ವಾಸ್‌ನ ಅನನ್ಯ ಕೆ.ಎ, ಕೆ.ದಿಶಾ ಪಿ.ಯು ಸಾಧಕಿಯರು ಸಾರ್ವತ್ರಿಕ ದಾಖಲೆ – ಡಾ.ಆಳ್ವ ಹರ್ಷ
ಮೂಡುಬಿದಿರೆ: ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು, ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಅನನ್ಯ ಕೆ.ಎ ಅವರು ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ 600ಕ್ಕೆ 600 ಅಂಕದೊಂದಿಗೆ
ಪೂರ್ಣಾಂಕಗಳನ್ನು ಪಡೆದು ಹೊಸ ದಾಖಲೆ ಸೃಷ್ಟಿಸಿದ್ದಾರೆ. ಇದೇ ಕಾಲೇಜಿನ ವಾಣಿಜ್ಯ ವಿಭಾಗದ ಕೆ.ದಿಶಾ ರಾವ್ 596 ಅಂಕಪಡೆದು ಎರಡನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಗುಣಮಟ್ಟದ ಶಿಕ್ಷಣದೊಂದಿಗೆ, ವಿದ್ಯಾರ್ಥಿಗಳನ್ನು ಸಶಕ್ತ ನಾಗರೀಕರನ್ನಾಗಿಸುವ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಮತ್ತೊಮ್ಮೆ ರಾಜ್ಯದಲ್ಲಿ ಹೊಸ ದಾಖಲೆ ಬರೆಯುವಂತಾಗಿದೆ.
ಡಾ.ಆಳ್ವ ಹರ್ಷ: ದ್ವಿತೀಯ ಪಿ.ಯು. ಫಲಿತಾಂಶ ಒಂದು ದಾಖಲೆಯಾಗಿದೆ. 94.67% ಫಲಿತಾಂಶ ದಾಖಲಿಸುವ ಮೂಲಕ ಹೊಸ ಇತಿಹಾಸವೊಂದು ಸೃಷ್ಟಿಯಾದಂತಾಗಿದೆ ಎಂದು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದ್ದಾರೆ. ಆಳ್ವಾಸ್ ಪದವಿಪೂರ್ವ ಕಾಲೇಜಿನ ಫಲಿತಾಂಶವೂ ಸಾರ್ವತ್ರಿಕ ದಾಖಲೆಯಾಗಿದೆ ಎಂದ ಮೋಹನ ಆಳ್ವರು ಇದು ಸಂಸ್ಥೆಗೆ ಹೆಮ್ಮೆ ತರುವ ವಿಚಾರವಾಗಿದೆ ಎಂದರು. ಪದವಿಪೂರ್ವ ವಿಭಾಗದಲ್ಲಿ ವಿದ್ಯಾರ್ಥಿಗಳು ವಿವಿಧ ಸ್ಥಾನಗಳನ್ನು ಪಡೆದುಕೊಂಡು ಉತ್ತಮ ಸಾಧನೆ ಮಾಡಿದ್ದು ಶ್ಲಾಘನಾರ್ಹ ಎಂದ ಡಾ.ಆಳ್ವ ಸಾಧಕ ವಿದ್ಯಾರ್ಥಿಗಳನ್ನು, ಅಧ್ಯಾಪಕ ವರ್ಗವನ್ನು ಅಭಿನಂದಿಸಿದ್ದಾರೆ.
ಕ್ರೀಡಾ ಸಾಧಕಿ ಶಿಕ್ಷಣದಲ್ಲೂ ಸೈ
ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಅನನ್ಯ ಕೆ ಎ. ಮೂಲತಃ ಕೊಡಗಿನ ಕುಶಾಲ್ ನಗರದವರು. ನಿವೃತ್ತ ಯೋಧ ಅಶೋಕ್ ಕೆ.ಎ ಹಾಗೂ ನಳಿನಿ ಅವರ ಸುಪುತ್ರಿ. ರಾಷ್ಟಿçÃಯ ಮಟ್ಟದ ವಾಲಿಬಾಲ್ ಕ್ರೀಡಾಳುವಾಗಿರುವ ಅನನ್ಯ ಕೆ.ಎ. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕ್ರೀಡಾ ದತ್ತು ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಗಾಯದ ತೊಂದರೆಯಿAದ ಕ್ರೀಡಾ ದತ್ತು ವಿಭಾಗದಲ್ಲಿ ಮುಂದುವರಿಯದೆ ಶೈಕ್ಷಣಿಕ ದತ್ತು ಯೋಜನೆಯಡಿ ದ್ವಿತೀಯ ಪಿ.ಯು.ಸಿ.ಯಲ್ಲಿ ವ್ಯಾಸಂಗ ಮುಂದುವರಿಸಿದರು. ನಿರಂತರ ಅಭ್ಯಾಸ, ಆಳ್ವಾಸ್ ಸ್ಟಡೀ ಮೆಟೀರಿಯಲ್ಸ್ ಮೂಲಕ ಕಲಿಕೆ, ದಿನದಲ್ಲಿ ಹೆಚ್ಚುವರಿ 5ಗಂಟೆಗಳ ಅಭ್ಯಾಸಗಳು ಇವರ ಸಾಧನೆಗೆ ಪೂರಕವಾಗಿದೆ. ವಾರಾಂತ್ಯದಲ್ಲಿ ಹೆಚ್ಚುವರಿ ಸಮಯವನ್ನು ಕಲಿಕೆಗೆ ಮೀಸಲಿಡುತ್ತಿದ್ದು, ವಾಣಿಜ್ಯ ವಿಭಾಗದಲ್ಲಿ ದೊಡ್ಡ ಸಾಧನೆ ಮಾಡುವ ಆಸೆ ಹೊಂದಿದ್ದಾರೆ. ಮೇ ತಿಂಗಳಲ್ಲಿ ನಡೆಯುವ ಸಿ.ಎ. ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದು ಸಿ.ಎಸ್ ನಲ್ಲಿ ಮುಂದುವರಿಯುವ ಆಸೆ ಹೊಂದಿದ್ದಾರೆ.
ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ: ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಪ್ರಾಂತ್ಯ ಗ್ರಾಮದ ಪೇಪರ್ ಮಿಲ್ ನಿವಾಸಿ ಕೆ.ದಿಶಾ ರಾವ್ ವಾಣಿಜ್ಯ ವಿಭಾಗದಲ್ಲಿ 596 ಅಂಕಪಡೆದು ಎರಡನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಕೆ. ಬಾಲಕೃಷ್ಣ ರಾವ್ (ಮೆಡಿಕಲ್ ರೆಪ್), ಶಾರದಾ (ಇನ್ಫೋಸಿಸ್ ಉದ್ಯೋಗಿ) ದಂಪತಿಯ ಮಗಳಾದ ಇವರು ದಿನಂಪ್ರತಿ ಮೂರುಗಂಟೆಗಳ ಹೆಚ್ಚುವರಿ ಕಲಿಕೆಯ ಮೂಲಕ ಈ ಸಾಧನೆ ಮೆರೆದಿದ್ದಾರೆ. ತನ್ನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದ ಅವರು 590ಕ್ಕೂ ಅಧಿಕ ಅಂಕ ಪಡೆಯುವ ನಿರೀಕ್ಷೆ ಹೊಂದಿದ್ದರು. ಎಸ್ ಎಸ್ ಎಲ್ ಸಿ ಯಲ್ಲಿ 87ಅಂಕ ಪಡೆದಿದ್ದ ಇವರು ಸಿ.ಎ. ಫೌಂಡೇಷನ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಸಿ.ಎ ಮಾಡುವ ಆಸೆ ಹೊಂದಿದ್ದಾರೆ.