ಭಾರತದ ಅಸ್ಮಿತೆಯೇ ಬಹುಮುಖೀ ಸಂಸ್ಕೃತಿ: ಎಂ.ಜಿ.ಹೆಗಡೆ
ಬಂಟ್ವಾಳ: ಭಾರತದ ಅಸ್ಮಿತೆಯೇ ಬಹುಮುಖೀ ಸಂಸ್ಕೃತಿ.ಇದನ್ನು ನೆಲೆ ನಿಲ್ಲಿಸಿದ್ದು ಕಾಂಗ್ರೆಸ್.ಎರಡೂ ಕೋಮುವಾದಿ ಶಕ್ತಿಗಳು ಬಡ ಯುವಕರ ಮನಸ್ಸಲ್ಲಿ ಹುಚ್ಚು ಕನಸು ಹುಟ್ಟು ಹಾಕುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಎಂ.ಜಿ.ಹೆಗ್ಡೆ ಹೇಳಿದ್ದಾರೆ.

ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆಯ 8ನೇ ದಿನ ಶುಕ್ರವಾರ ರಾತ್ರಿ ಗುಡ್ಡೆಅಂಗಡಿ ಜಂಕ್ಷನ್ನಿನಲ್ಲಿ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಗೆ ಸಿದ್ದಾಂತದಲ್ಲೆ ಗೊಂದಲ ಇದೆ ಎಂದರು.
ದ.ಕ.ಜಿಲ್ಲೆಯಲ್ಲಿ ಮೂವತ್ತು ವರ್ಷದಿಂದ ಬಿಜೆಪಿಯ ಸಂಸದರಾಗಿದ್ದು ಏನೂ ಮಾಡಲಾಗದವರು ಕಾಂಗ್ರೆಸ್ ಎಪ್ಪತ್ತು ವರ್ಷದಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ ಎಂದರೆ ಇದು ವ್ಯಂಗ್ಯವಲ್ಲದೇ ಇನ್ನೇನು ಎಂದು ಪ್ರಶ್ನಿಸಿದ ಎಂ ಜಿ ಹೆಗ್ಡೆ ಹಿಂದುತ್ವಕ್ಕೆ ಬೇಸ್ ಇಲ್ಲ. ಕೇವಲ ಚುನಾವಣಾ ಗಿಮಿಕ್ ಮಾತ್ರವಾಗಿ ಹಿಂದುತ್ವ ಬಳಸಲ್ಪಡುತ್ತಿದೆ ಎಂದು ಟೀಕಿಸಿದರು.
ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೆ: ರೈ
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಿ ರಮಾನಾಥ ರೈ, ನಕಾರಾತ್ಮಕ ಚಿಂತನೆಗಳಿಗೆ ಜನ ಮರುಳಾಗುವುದು ಜಾಸ್ತಿ. ಆದರೆ ಈ ಬಾರಿ ಜನ ಎಲ್ಲ ಅರ್ಥ ಮಾಡಿಕೊಂಡಿದ್ದಾರೆ. ಅಪಪ್ರಚಾರಕ್ಕೆ ಇನ್ನು ಮುಂದೆ ಜನ ಬೆಲೆ ನೀಡಲಾರರು. ತನಗೆ ಕ್ಷೇತ್ರದ ಜನತೆ ಅವಕಾಶ ಕಲ್ಪಿಸಿದರೆ ಬಂಟ್ವಾಳ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆಯಿತ್ತರು.
ಇದೇ ವೇಳೆ ಯುವ ಜೆಡಿಎಸ್ ಮುಖಂಡ ಜಿ ಎ ಅಮಾನುಲ್ಲಾ ಅವರು ಮಾಜಿ ಸಚಿವ ರಮಾನಾಥ ರೈ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಸಭಾ ಕಾರ್ಯಕ್ರಮಕ್ಕೂ ಮುಂಚಿತವಾಗಿ ಪಾಣೆಮಂಗಳೂರು ಪೇಟೆಯಿಂದ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ಗುಡ್ಡೆಅಂಗಡಿಯಲ್ಲಿ ಜೆಸಿಬಿ ಬಳಸಿ ರಮಾನಾಥ ರೈ ಅವರಿಗೆ ಪುಷ್ಪಾರ್ಚನೆ ಮಾಡಿ ಅದ್ದೂರು ಸ್ವಾಗತಿಸಲಾಯಿತು.
ಈ ಸಂದರ್ಭ ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ ಜೈನ್, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಕೆ ಕೆ ಶಾಹುಲ್ ಹಮೀದ್, ಸಂಘಟನಾ ಕಾರ್ಯದರ್ಶಿ ಶರೀಫ್ ಭೂಯಾ, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜ, ಸದಸ್ಯರಾದ ಲುಕ್ಮಾನ್ ಬಿ ಸಿ ರೋಡು, ಜನಾರ್ದನ ಚೆಂಡ್ತಿಮಾರ್, ಬಿ ವಾಸು ಪೂಜಾರಿ, ಲೋಲಾಕ್ಷ ಶೆಟ್ಟಿ, ಮುಹಮ್ಮದ್ ನಂದರಬೆಟ್ಟು, ಹಸೈನಾರ್ ತಾಳಿಪಡ್ಪು, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ,ಪಕ್ಷದ ಮುಖಂಡರಾದ ಮಾಯಿಲಪ್ಪ ಸಾಲ್ಯಾನ್,ಅರ್ಶದ್ ಸರವು, ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಪೂಜಾರಿ ಜೋರಾ, ಕೆ ಪದ್ಮನಾಭ ರೈ, ಸಂಪತ್ ಕುಮಾರ್ ಶೆಟ್ಟಿ, ಅಬ್ದುಲ್ ರಝಾಕ್ ಕುಕ್ಕಾಜೆ, ಉಸ್ಮಾನ್ ಕರೋಪಾಡಿ, ಸಂಜೀವ ಪೂಜಾರಿ, ದೇವಿಪ್ರಸಾದ್ ಪೂಂಜಾ, ಶಶಿಧರ್ ಹೆಗ್ಡೆ, ಟಿ ಎಂ ಶಹೀದ್ ಸುಳ್ಯ, ಪಿ.ಎ. ರಹೀಂ, ಸ್ಟೀವನ್ ಡಿಸೋಜ,ಎಂ. ಚಂದ್ರಶೇಖರ ಪೂಜಾರಿ, ವೆಂಕಪ್ಪ ಪೂಜಾರಿ ಬಂಟ್ವಾಳ, ಉಮೇಶ್ ನಾಯಿಲ,ಜಯಂತಿ ಪೂಜಾರಿ ಮೊದಲಾದವರು ಭಾಗವಹಿಸಿದ್ದರು. ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಸ್ವಾಗತಿಸಿ, ರಾಜೀವ್ ಶೆಟ್ಟಿ ಎಡ್ತೂರು ಪ್ರಸ್ತಾವನೆಗೈದರು. ಪಾಣೆಮಂಗಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಇಕ್ಬಾಲ್ ವಂದಿಸಿದರು. ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.