ಬಂಟ್ವಾಳ: ೧೨ನೇ ವರ‍್ಷದ ಮೂಡೂರು-ಪಡೂರು ಜೋಡುಕರೆ ಕಂಬಳಕ್ಕೆ ಚಾಲನೆ ಕೂಡಿ ಬಾಳುವ ಸೌಹರ‍್ದತೆಗಾಗಿ ಕಂಬಳ: ಮಾಜಿ ಸಚಿವ ರೈ
ಬಂಟ್ವಾಳ:ಅವಿಭಜಿತ ಜಿಲ್ಲೆಯಲ್ಲಿ ಎಲ್ಲಾ ಜಾತಿ ಮತ್ತು ರ‍್ಮಗಳ ಕೃಷಿಕರು ಮನೋರಂಜನೆಗಾಗಿ ಆರಂಭಿಸಿದ್ದ ಜಾನಪದ ಕಂಬಳ ಕ್ರೀಡೆಗೆ ಪೂರಕವಾಗಿ ಇಲ್ಲಿನ ಕೂಡಿಬೈಲು ಹಿಂದೂ-ಮುಸ್ಲಿಂ ಮತ್ತು ಕ್ರೈಸ್ತರ ಗದ್ದೆಯಲ್ಲಿ ಮೂಡೂರು-ಪಡೂರು ಕಂಬಳ ನಡೆಸುವ ಮೂಲಕ ಕೂಡಿ ಬಾಳುವ ಸೌಹರ‍್ದತೆಯ ಸಂದೇಶ ಸಾರುತ್ತಿದೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಇಲ್ಲಿನ ನಾವೂರು ಗ್ರಾಮದ ಕೂಡಿಬೈಲು ಗದ್ದೆಯಲ್ಲಿ ಶನಿವಾರ ಆರಂಭಗೊಂಡ ೧೨ನೇ ವರ‍್ಷದ ‘ಮೂಡೂರು-ಪಡೂರು’ ಜೋಡುಕರೆ ಬಯಲು ಕಂಬಳ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಪರಸ್ಪರ ಶಾಂತಿ ಮತ್ತು ಸೌಹರ‍್ದತೆ ಉಳಿಸುವ ನಿಟ್ಟಿನಲ್ಲಿ ಇಲ್ಲಿನ ಕಂಬಳವೂ ಸೌಹರ‍್ದತೆಯಿಂದಲೇ ಮುಂದುವರಿಯಲಿದೆ ಎಂದರು.
ಮಾಜಿ ಶಾಸಕ ಜೆ.ಆರ್.ಲೋಬೋ, ಅಲ್ಲಿಪಾದೆ ಸಂತ ಅಂತೋನಿ ಚರ್ಚ್ ನ ಧರ‍್ಮಗುರು ಫೆಡ್ರಿಕ್ ಮೊಂತೆರೋ, ಕಾರಿಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪಿ.ಜಿನರಾಜ ಅರಿಗ, ಮಡಂತ್ಯಾರು ಸೆಕ್ರೆಡ್ ಹಾಟ್ರ್ ಚರ್ಚ್ನ ಧರ‍್ಮಗುರು ಬಾಝಿಲ್ ವಾಸ್, ನಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಉಮೇಶ ಕುಲಾಲ್, ಉಪಾಧ್ಯಕ್ಷೆ ಲವಿನಾ ವಿಲ್ಮಾ ಮೊರಾಸ್, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಉದ್ಯಮಿ ಭುವನೇಶ ಪಚ್ಚಿನಡ್ಕ, ರಾಮಚಂದ್ರ ಶೆಟ್ಟಿ ಮಂಗಳೂರು, ರಚನಾ ಪ್ರಶಸ್ತಿ ಪುರಸ್ಕೃತ ಕೃಷಿಕ ಲಿಯೋ ಫೆರ್ನಾಂ ಡಿಸ್ ಸರಪಾಡಿ, ತಾಲ್ಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ‍್ಮ ಬಲ್ಲಾಲ್, ಕೆಪಿಸಿಸಿ ಸಂಯೋಜಕ ನಂದಕುಮಾರ್ ಸುಳ್ಯ ಶುಭ ಹಾರೈಸಿದರು.
ಕಂಬಳ ಸಮಿತಿ ಸಂಚಾಲಕ ಬಿ.ಪದ್ಮಶೇಖರ ಜೈನ್, ಕಾರ್ಯಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು, ಕೋಶಾಧಿಕಾರಿ ಪಿಲಿಫ್ ಫ್ರಾಂಕ್, ಪ್ರಮುಖರಾದ ಕೆ.ಮಾಯಿಲಪ್ಪ ಸಾಲ್ಯಾನ್, ಸುರ‍್ಶನ್ ಜೈನ್, ಅವಿಲ್ ಮಿನೇಜಸ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಅಬ್ಬಾಸ್ ಆಲಿ, ಕೆ.ಪದ್ಮನಾಭ ರೈ, ಸದಾಶಿವ ಬಂಗೇರ, ವಕೀಲ ಚಂದ್ರಶೇಖರ ಪೂಜಾರಿ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಪ್ರವೀಣ್ ಜಕ್ರಿಬೆಟ್ಟು, ದೇವಪ್ಪ ಕುಲಾಲ್, ಸುಧಾಕರ ಶೆಣೈ ಖಂಡಿಗ, ವೆಂಕಪ್ಪ ಪೂಜಾರಿ ಮತ್ತಿತರರು ಇದ್ದರು.
ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್ ಸ್ವಾಗತಿಸಿ, ಬಾಲಕೃಷ್ಣ ಆಳ್ವ ಕೊಡಾಜೆ ಕಾರ‍್ಯಕ್ರಮ ನಿರೂಪಿಸಿದರು.
ವಿಶೇಷತೆ:
ಮೂಡೂರು-ಪಡೂರು ಕಂಬಳ ಕರೆ ಉದ್ದಕ್ಕೂ ವಿದ್ಯುತ್ ದೀಪಗಳಿಂದ ವಿಶೇಷ ಅಲಂಕಾರ, ಸಭಾಂಗಣ ಎದುರು ತುಳುನಾಡ ಬಾವುಟ ಹಾರಾಟ, ಕೋಣಗಳಿಗೆ ಗಂತು ಮತ್ತು ಮಂಜೊಟ್ಟಿಯಲ್ಲಿ ನೆರಳಿನ ವ್ಯವಸ್ಥೆ, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ, ಕಂಬಳಾಸಕ್ತರಿಗೆ ಮಧ್ಯಾಹ್ನ ಬಿಸಿಯೂಟ, ಶಾಶ್ವತ ಕಚೇರಿ ಮತ್ತು ಸುಸಜ್ಜಿತ ಶೌಚಾಲಯ ನಿರ್ಮಾಣ, ವಿಶಾಲವಾದ ಪಾರ್ಕಿಂಗ್, ಅತಿಥಿಗಳನ್ನು ಕರೆ ತರಲು ಬ್ಯಾಂಡು ವಾದ್ಯ ಸಹಿತ ಗೊಂಬೆ ಕುಣಿತ ಗಮನ ಸೆಳೆಯಿತು.