ಉಚಿತ ಸೈಕಲ್ ವಿತರಣೆ
ಬಂಟ್ವಾಳ: ಎಸ್.ವಿ.ಎಸ್.ದೇವಳ ಅಂಗ್ಲ ಮಾಧ್ಯಮ ಶಾಲೆಯ 30 ಅರ್ಹ ವಿದ್ಯಾರ್ಥಿಗಳಿಗೆ ಕನರಾ ರೊಬೆಕೋ ಮ್ಯೂಚುವಲ್ ಫಂಡ್ ಸಂಸ್ಥೆಯ ವತಿಯಿಂದ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ ಶಾಲಾ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ರೊಬೆಕೋ ಮ್ಯೂಚ್‌ವಲ್ ಫಂಡ್ ನ ವಲಯ ಮುಖ್ಯಸ್ಥರಾದ ಮುರಳೀಧರ ಶೆಣೈ, ಶಾಲಾ ಸಂಚಾಲಕರಾದ ಭಾಮಿ ನಾಗೇಂದ್ರನಾಥ್ ಶೆಣೈ, ಮುಖ್ಯೋಪಾಧ್ಯಾಯಿನಿ ರೋಶನಿ ತಾರಾ ಡಿಸೋಜ, ಸಹ ಮುಖ್ಯೋಪಾಧ್ಯಾಯಿನಿ ಜಾನಕಿ ರಾಜೇಶ್ ಉಪಸ್ಥಿತರಿದ್ದರು.