ಸವಿತಾ ಮಹರ್ಷಿ ಜಯಂತಿ ಆಚರಣೆ
ಮಂಗಳೂರು: ದ.ಕ. ಜಿಲ್ಲಾ ಸವಿತಾ ಸಮಾಜ ಮತ್ತು ಮಂಗಳೂರು ತಾಲೂಕು ಸವಿತಾ ಸಮಾಜ ದ ಆಶ್ರಯದಲ್ಲಿ ಸವಿತಾ ಮಹರ್ಷಿ ಜಯಂತಿ ಶನಿವಾರ ಉರ್ವಸ್ಟೋರ್ ತುಳುಭವನದ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಮಂಗಳೂರು ಕೊಂಕಣಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಮನೋಹರ್ ಕಾಮತ್, ದ.ಕ. ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ಆನಂದ ಭಂಡಾರಿ, ದ.ಕ. ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ವಸಂತ ಎಂ. ಬೆಳ್ಳೂರು, ಮಂಗಳೂರು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಸಂಜಯ್ ಮಹಾಲೆ, ಉರ್ವಸ್ಟೋರ್ ವಲಯ ಸವಿತಾ ಸಮಾಜದ ಅಧ್ಯಕ್ಷ ಶಿವ ಕುಮಾರ್, ಕಾರ್ಯದರ್ಶಿ ತಿಮ್ಮಪ್ಪ , ಉರ್ವಸ್ಟೋರ್ ವಲಯ ಸವಿತಾ ಸಮಾಜದ ಮಾಜಿ ಅದ್ಯಕ್ಷ ಗಂಗಾಧರ ಬೋಳೂರು ಉಪಸ್ಥಿತರಿದ್ದರು.