ಬಂಟ್ಚಾಳ: ತಾಲೂಕಿನ ವಾಮದಪದವು ವಲಯ ಬಂಟರಸಂಘಕ್ಕೆ ಆಲದಪದವಿನಲ್ಲಿ ಸುಮಾರು ಎರಡು ಕೋ.ರೂ.ವೆಚ್ಚದಲ್ಲಿ  ನಿರ್ಮಿಸಲುದ್ದೇಶಿಸಿರುವ “ಪದವು ಬಂಟರಭವನ” ಕ್ಕೆ 2023 ರ ಜನವರಿ 5 ರಂದು ಶಿಲಾನ್ಯಾಸ ಕಾರ್ಯಕ್ರಮ ನಢಯಲಿದೆ  ಎಂದು ಸಂಘದ ಗೌರವ ಸಲಹೆಗಾರಾದ ಅಶೋಕ್ ಪಕ್ಕಳ ಶ್ರೀಸನ್ನಿಧಿಗುತ್ತು ಅವರು ತಿಳಿಸಿದ್ದಾರೆ.

ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ‌ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಸಂಘಕ್ಕೆ ಆಲದಪದವಿನಲ್ಲಿ‌1.61 ಎಕ್ರೆ ನಿವೇಶನವನ್ನು ಖರೀದಿಸಲಾಗಿದ್ದು, ವಾಮದಪದವು ವಲಯಕ್ಕೊಳಪಟ್ಟ ಆರು ಗ್ರಾಮದ  ಸಮಾಜದ ಬಂಧುಗಳ ಹಾಗೂ ದಾನಿಗಳ ಸಹಕಾರದಿಂದ ಪದವು ಬಂಟರ ಭವನ ನಿರ್ಮಿಸಲಾಗುತ್ತಿದೆ ಎಂದರು.
ಮುಂಬೈಯ ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು‌ಶಿಲಾನ್ಯಾಸ ನೆರವೇರಿಸಲಿದ್ದು, ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು,ಜಾಗತಿಕ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ,ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ,ನಗ್ರಿಗಿತ್ತು ವಿವೇಕ್ ಶೆಟ್ಟಿ,ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಮಲಾಡಿ,ಡಾ.ಮೋಹನ್ ಆಳ್ವ,ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ಹಲವಾರು ಗಣ್ಯರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಶಿಲಾನ್ಯಾಸಕ್ಕೆ ಮುನ್ನ ಭರತನಾಟ್ಯ ಕಾರ್ಯಕ್ರಮ ಸಭಾಕಾರ್ಯಕ್ರಮದ ಬಳಿಕ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.ಕಾರ್ಯಕ್ರಮದ ಹಿನ್ನಲೆಯಲ್ಲಿ ಸಕಲ ಸಿದ್ದತೆ ನಡೆಯುತ್ತಿದೆ ಎಂದರು.
ಭವಿಷ್ಯದಲ್ಲಿ ಸಂಘವು ತರಬೇತಿ‌ಕೇಂದ್ರ,ಶಾಲೆಯನ್ನು‌ ತೆರೆಯುವುದು ಸಹಿತ ಸಮಾಜದ ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ವಸಂತಶೆಟ್ಟಿ ಕೇದಗೆ,ಸ್ಥಾಪಕಾಧ್ಯಕ್ಷರಾದ ಅಮ್ಮರೈ ಹರ್ಕಾಡಿ,ಪದಾಧಿಕಾರಿಗಳಾದ ರಮೇಶ್ ಶೆಟ್ಟಿ ವಾಮದಪದವು, ರಾಮಚಂದ್ರ ಶೆಟ್ಟಿ ದಂಡೆ  ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

By suddi9

Leave a Reply

Your email address will not be published. Required fields are marked *