ಬ್ರಹ್ಮಶ್ರೀ ನಾರಾಯಣಗುರು ಮಂದಿರ ತೆಂಕ ಎಡಪದವು ಇದರ ೧೬೮ನೇ ಜನ್ಮದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ
ಕೈಕಂಬ: ಬ್ರಹ್ಮಶ್ರೀ ನಾರಾಯಣಗುರು ಮಂದಿರ ತೆಂಕ ಎಡಪದವು ಇದರ ೧೬೮ನೇ ಜನ್ಮದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.
ನೂತನ ಅಧ್ಯಕ್ಷರಾಗಿ ಜಯರಾಮ ಪಡ್ಯಾರ್ ಉಪಾಧ್ಯಕ್ಷರಾಗಿ ಶಂಕರ್ ಡಿ ಸುವರ್ಣ ಕಾರ್ಯದರ್ಶಿಗಳಾಗಿ ಗಂಗಾಧರ ಪೂಜಾರಿ ಹಾಗೂ ಇತರ ಪದಾಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಸತೀಶ್ ಬೋರುಗುಡ್ಡೆ ಕಾರ್ಯಕ್ರಮ ನಿರೂಪಿಸಿ ಗಂಗಾದರವರು ವಂದನಾರ್ಪಣೆ ಗೈದರು. ನಂತರ ಸಾಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡ್ಯಾನ್ಸಿಂಗ್ ಸ್ಟಾರ್ ಡ್ಯಾನ್ಸಿಂಗ್ ಅಕಾಡೆಮಿ ಎಡಪದವು ಇವರಿಂದ ನೃತ್ಯ ನಡೆಯಿತು.