ವಿಟ್ಲ: ಸೈಂಟ್ ರೀಟಾ ವಿದ್ಯಾ ಸಂಸ್ಥೆಯ ಶತಮಾನೋತ್ಸವ
ವಿಟ್ಲ: ಸೈಂಟ್ ರೀಟಾ ವಿದ್ಯಾ ಸಂಸ್ಥೆಯ ಅನುದಾನಿತ ಕನ್ನಡ ಮಾಧ್ಯಮ ಹಿ. ಪ್ರಾ ಶಾಲೆಯ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಶತಮಾನೋತ್ಸವ ಸ್ಮಾರಕ ಸಮುದಾಯ ಭವನದಲ್ಲಿ ನ.22ರಂದು ಮಂಗಳವಾರ ನಡೆಯಿತು.

ಈ ಕಾರ್ಯಕ್ರಮವನ್ನು ವಿದ್ಯಾ ಸಂಸ್ಥೆಯ ಜತೆ ಕಾರ್ಯದರ್ಶಿ ಫಾ| ಐವನ್ ಮೈಕಲ್ ರೋಡ್ರಿಗಸ್ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ಫಾ| ಸುನಿಲ್ ಪಿಂಟೊ, ಮುಖ್ಯ ಶಿಕ್ಷಕಿ ಜೋನೆಟ್ ಡಿ ಸೋಜಾ, ಮನೋಹರ ಲ್ಯಾನ್ಸಿ ಡಿ ಸೋಜಾ, ಸಿಸ್ಟರ್ ಮರಿನಾ, ಸಿ ಎಫ್ ಸಿಕ್ವೇರಾ, ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.