ವಿಟ್ಠಲ ‘ಇನ್‌ಸ್ಪಯರ್ ಫಾರ್ ಯುವರ್ ಸಕ್ಸಸ್ ೨೦೨೨-೨೩’ ಕಾರ್ಯಕ್ರಮ
ವಿಟ್ಲ: ವಿಟ್ಠಲ ಎಜುಕೇಶನ್ ಸೊಸೈಟಿ ವಿಟ್ಲ, ವಿಟ್ಠಲ ಪದವಿ ಪೂರ್ವ ಕಾಲೇಜು ಇದರ ಸುವರ್ಣ ಮಹೋತ್ಸವದ ಪ್ರಯುಕ್ತ ‘ಇನ್‌ಸ್ಪಯರ್ ಫಾರ್ ಯುವರ್ ಸಕ್ಸಸ್ ೨೦೨೨-೨೩’ ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವೈಯಕ್ತಿಕ ಪೆನ್ಸಿಲ್ ಡ್ರಾಯಿಂಗ್, ವಿಜ್ಞಾನ ಮಾದರಿ, ಮೆಮೊರಿ ಟೆಸ್ಟ್, ಕನ್ನಡ ಭಾಷಣ, ಕ್ವಿಜ್, ಭಾವಗೀತೆ ಮತ್ತು ರಂಗೋಲಿ, ಸಮೂಹ ಜಾನಪದ ನೃತ್ಯ, ಗಾಯನ ಮತ್ತು ಹಾಸ್ಯ ಪ್ರಹಸನ ಹಾಗೂ ಕ್ರೀಡೆಯಲ್ಲಿ ಕಬಡ್ಡಿ ಮತ್ತು ವಾಲಿಬಾಲ್ ಸ್ಪರ್ಧೆಗಳು ನ.೧೯ರಂದು ಶನಿವಾರ ವಿಟ್ಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಲಿದೆ.
![](https://www.suddi9.com/wp-content/uploads/2022/11/SHV_6571-650x433.jpg)