ಕೆಂಪೇಗೌಡ ರಥಕ್ಕೆ ಪೊಳಲಿಯ ಮೃತ್ಯುಕೆ ಸಂಗ್ರಹ
ಪೊಳಲಿ: ನಾಡಪ್ರಭು ಕೆಂಪೇಗೌಡರ ಸ್ಮಾರಕ ನಿರ್ಮಾಣದ ಕಂಚಿನ ಭವ್ಯ ಪ್ರತಿಮೆಯ ಅನಾವರಣದ ಪ್ರಯುಕ್ತ ಕೆಂಪೇಗೌಡ ರಥಕ್ಕೆ, ಕರಿಯಂಗಳ ಗ್ರಾಮ ಪಂಚಾಯತ್ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮುಂಭಾಗ ಮೃತ್ಯುಕೆಯನ್ನು ಸಂಗ್ರಹಿಸಿ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ನ ಜನಪ್ರತಿನಿಧಿಗಳು, ದೇವಸ್ಥಾನದ ಸಮಿತಿಯವರು ,ಗ್ರಾಮದ ಸಾರ್ವಜನಿಕರು, ಹಾಗೂ ತಾಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ನಿರ್ದೇಶಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ,ಕಂದಾಯ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.