ಮಂಗಳೂರು; ಕಮಿಷನರ್ ಸೀಟೇರಿದ ಮಗು
ಮಂಗಳೂರು: ಕರಾವಳಿಯ ಮಂಗಳೂರಿನಲ್ಲಿ ಅಪರೂಪದ ಘಟನೆಯೊಂದು ನಡೆದಿದೆ.ಅಪಘಾತದಲ್ಲಿ ಮೃತ ಪೊಲೀಸ್ ಅಧಿಕಾರಿಯ ಮಗಳನ್ನು ಕಮಿಷನರ್ ಶಶಿಕುಮಾರ್ ತನ್ನ ಕುರ್ಚಿಯಲ್ಲಿ ಕೂರಿಸಿ ಗೌರವಿಸುವ ಮೂಲಕ ಪ್ರಸಂಸೆಗೆ ಪಾತ್ರರಾಗಿದ್ದಾರೆ.
2016-17ರ ವೇಳೆಯಲ್ಲಿ ಮಂಗಳೂರಿನಲ್ಲಿ ರವಿಕುಮಾರ್ ಎಂಬವರು ಎಎಸ್ಪಿಯಾಗಿದ್ದರು.ಮಂಗಳೂರು ಎಸಿಪಿ ಆಗಿದ್ದ ರವಿ ಕುಮಾರ್ 2017ರಲ್ಲಿ ಮೈಸೂರಿಗೆ ಲೋಕಾಯುಕ್ತ ಎಸ್ಪಿ ಆಗಿ ಬಡ್ತಿ ಹೊಂದಿ ವರ್ಗಾವಣೆಗೊಂಡಿದ್ದರು.ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮೈಸೂರಿಗೆ ವಾಪಸಾಗುವ ವೇಳೆ ಅವರ ಕಾರು ಅಪಘಾತವಾಗಿ ಮೃತಪಟ್ಟಿದ್ದರು. 2008ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದ ರವಿ ಕುಮಾರ್ ಅವರಿಗೆ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಮೃತಪಟ್ಟಿದ್ದರು.ಅವರಿಗೆ ಒಂದು ಹೆಣ್ಣು ಮಗುವಿತ್ತು.
ಇಂದು ರವಿ ಕುಮಾರ್ ಅವರ ಪತ್ನಿ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ್ದರು.ಈ ವೇಳೆ ರವಿ ಕುಮಾರ್ ಅವರ ಪುತ್ರಿ ಪ್ರಣೀತಾರನ್ನು ತಮ್ಮ ಸೀಟ್ ಮೇಲೆ ಕೂರಿಸಿ ಅಗಲಿದ ರವಿ ಕುಮಾರ್ ಅವರಿಗೆ ಕಮಿಷನರ್ ಶಶಿಕುಮಾರ್ ಗೌರವಿಸಿದರು.