ಅ.30ರಂದು ವಿಟ್ಲ ಯಕ್ಷೋತ್ಸವ ಕಾರ್ಯಕ್ರಮ
ವಿಟ್ಲ: ಯಕ್ಷ ಭಾರತ ಸೇವಾ ಪ್ರತಿಷ್ಠಾನ ವಿಟ್ಲ ಇದರ ೭ ನೇ ವರ್ಷದ ವಿಟ್ಲ ಯಕ್ಷೋತ್ಸವ ಕಾರ್ಯಕ್ರಮ ಶ್ರೀ ಭಗವತೀ ದೇವಸ್ಥಾನದ ಸಭಾ ಭವನದಲ್ಲಿ ಅ.೩೦ರಂದು ಭಾನುವಾರ ನಡೆಯಲಿದೆ.

ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಭಗವತೀ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು. ದೇವಸ್ಥಾನದ ಆಡಳಿತ ಮೊಕ್ತೇಸರ ಕೇಶವ ವಿಟ್ಲ, ಪ್ರತಿಷ್ಠಾನದ ಅಧ್ಯಕ್ಷ ಸಂಜೀವ ಪೂಜಾರಿ, ಪ್ರಶಾಂತ ಶೆಟ್ಟಿ, ಚಂದ್ರ, ಉಮೇಶ್ ಆಚಾರ್ಯ, ದೇವಪ್ಪ ಮತ್ತಿತರರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಮಕ್ಕಳ ಯಕ್ಷಗಾನ ಜಾಬವತಿ ಕಲ್ಯಾಣ, ತೆಂಕು ತಿಟ್ಟಿನ ನುರಿತ ಕಲಾವಿದರಿಂದ ಚಂದ್ರಾವಳಿ ವಿಳಾಸ ಮತ್ತು ಇಂದ್ರಜಿತು ಕಾಳಗ ಯಕ್ಷಗಾನ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ.