ಮುಂಬೈ: ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮ (MSRTC) ನೌಕರರಿಗೆ ದೀಪಾವಳಿ (Deepavali) ಪ್ರಯುಕ್ತ 5,000 ರೂ. ಬೋನಸ್ (Bonus) ನೀಡಲು ನಿರ್ಧರಿಸಿದೆ.
ಮಹಾರಾಷ್ಟ್ರ (Maharashtra) ಸಾರಿಗೆ ನಿಗಮಕ್ಕೆ ಸರ್ಕಾರ 45 ಕೋಟಿ ರೂ. ಆರ್ಥಿಕ ನೆರವು ನೀಡಿದ ಬೆನ್ನಲ್ಲೇ ನೌಕರರಿಗೆ ಬೋನಸ್ ಆಗಿ ತಲಾ 5,000 ರೂ. ನೀಡಲು ಕಂಪನಿ ಮುಂದಾಗಿದೆ. ಎಮ್‍ಎಸ್‌ಆರ್‌ಟಿಸಿ ತಿಳಿಸಿದ ಪ್ರಕಾರ ಸಾರಿಗೆ ನೌಕರರಿಗೆ ಪ್ರತಿಯೊಬ್ಬರಿಗೂ ಬೋನಸ್ ನೀಡಲು ನಿರ್ಧರಿಸಿದ್ದು, ಒಟ್ಟು 87,000 ನೌಕರರು ಈ ಪ್ರಯೋಜನ ಪಡೆಯಲಿದ್ದಾರೆ.

ಕೊರೊನಾ (Corona) ಬಳಿಕ ಎಮ್‍ಎಸ್‌ಆರ್‌ಟಿಸಿ ನಷ್ಟದಲ್ಲಿ ಕಾರ್ಯಚರಿಸುತ್ತಿತ್ತು. ಕಳೆದೆರಡು ವರ್ಷಗಳಿಂದ ನಷ್ಟದಲ್ಲಿದ್ದ ಎಮ್‍ಎಸ್‌ಆರ್‌ಟಿಸಿ ಇದೀಗ ಬೋನಸ್ ನೀಡಲು ಮುಂದಾಗಿದ್ದು, ನೇರವಾಗಿ ನೌಕರರ ಬ್ಯಾಂಕ್ ಖಾತೆಗೆ ಜಮೆ ಮಾಡುವುದಾಗಿ ತಿಳಿಸಿದೆ.
ಎಮ್‍ಎಸ್‌ಆರ್‌ಟಿಸಿ ದೇಶದ ಅತಿ ದೊಡ್ಡ ಸಾರಿಗೆ ಸಂಸ್ಥೆಗಳಲ್ಲಿ ಒಂದಾಗಿದ್ದು, ರಾಜ್ಯದಲ್ಲಿ ಒಟ್ಟು 16,000ಕ್ಕೂ ಹೆಚ್ಚು ಬಸ್‍ಗಳು ಕಾರ್ಯಚರಿಸುತ್ತಿದೆ. ಇತ್ತಿಚೇಗೆ ಪುಣೆಯಿಂದ ಅಹಮದ್‍ನಗರಕ್ಕೆ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಿಸಿತ್ತು.
