Published On: Thu, Oct 20th, 2022

ಮುಸ್ಲಿಮರು ರಾಮ ಮಂದಿರ ಧ್ವಂಸ ಮಾಡುವ ಕನಸನ್ನು ಕಾಣಬೇಡಿ: ಪ್ರಮೋದ್ ಮುತಾಲಿಕ್

ಹಾವೇರಿ: ಈ ದೇಶದ ಮುಸ್ಲಿಮರು ರಾಮ ಮಂದಿರ ಧ್ವಂಸ ಮಾಡುವ ಕನಸನ್ನು ಕಾಣಬೇಡಿ. ಹಿಂದೂ ಸಮಾಜ ಜಾಗೃತವಿದೆ, ಕಾನೂನಿದೆ, ಸಂವಿಧಾನವಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.

ಹಾವೇರಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರವನ್ನು ಬ್ಲಾಸ್ಟ್ ಮಾಡಬೇಕು ಎಂಬ ಪಿಎಫ್‍ಐನವರ (PFI) ಸಂಚು ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಎಟಿಎಸ್‍ನವರು ಬಂಧನ ಮಾಡಿದ ನಂತರ ಐವರು ಈ ಬಗ್ಗೆ ಬಾಯಿಬಿಟ್ಟಿದ್ದಾರೆ. ರಾಮ ಮಂದಿರವನ್ನು ಬ್ಲಾಸ್ಟ್ ಮಾಡಲು ಸಂಚು ರೂಪಿಸಿದ ಐವರನ್ನು ಎಟಿಎಸ್‌ನವರು ಬಂಧಿಸಿದ್ದು ಮತ್ತು ಪಿಎಫ್‍ಐ ಸಂಘಟನೆ ಬ್ಯಾನ್ ಮಾಡಿದ್ದು ಸ್ವಾಗತಾರ್ಹ ಎಂದರು.

ಬಾಬರ್ ದೇವಸ್ಥಾನವನ್ನು ಒಡೆದು ಮಸೀದಿ ಕಟ್ಟಿದ್ದಾರೆ ಎನ್ನುವುದನ್ನು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಅದನ್ನು ಧಿಕ್ಕರಿಸಿ ಬಾಬ್ರಿ ಮಸೀದಿ (Babri Masjid) ಕಟ್ತೀವಿ ಅನ್ನೋದು ಡೇಂಜರಸ್ ಮಾನಸಿಕತೆ ಇದೆ. ಈ ದೇಶದ ಮಣ್ಣಿನ ಅನ್ನ ತಿಂದು ಭಾರತದ ಇಸ್ಲಾಮಿನ ಕನಸು ಕಾಣ್ತಿರೋದು ಸರಿಯಲ್ಲ. ನಿಮ್ಮ ಬಣ್ಣ ಬಯಲಾಗಿದೆ ಎಂದು ಕಿಡಿಕಾರಿದರು.

ಈ ದೇಶದಲ್ಲಿ ನಿಮಗೆ ಸಾಕಷ್ಟು ಸ್ವಾತಂತ್ರ್ಯ ಕೊಟ್ಟಿದೆ. ಮತ್ತೆ ಬಾಬ್ರಿ ಮಸೀದಿ ಕಟ್ತೀವಿ ಅನ್ನೋದು ಬಾಬರ್‌ನ ಮಾನಸಿಕತೆ. ಬಾಬರ್ ದುಷ್ಟ, ನೀಚ, ಮತಾಂಧ ಮತ್ತು ದೇಶದ್ರೋಹಿ ಇದ್ದ. ಆ ಮಾನಸಿಕತೆ ಪಿಎಫ್‍ಐನ ಮುಸ್ಲಿಂ ಗೂಂಡಾಗಳಲ್ಲಿ ಇದ್ದಿದ್ದು, ಹೊರಗೆ ಬಿದ್ದಿದೆ. ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರ ಇದನ್ನು ತಡೆದಿದ್ದು ಸ್ವಾಗತಾರ್ಹ. ಮುಲ್ಲಾ, ಮೌಲ್ವಿಗಳು ಮತ್ತು ಮುಸ್ಲಿಂ ಮುಖಂಡರು ತಮ್ಮ ಸಮಾಜದ ಯುವಕರಿಗೆ ಈ ದೇಶಕ್ಕೆ, ಕಾನೂನಿಗೆ ಬದ್ಧರಾಗಿರಬೇಕು ಅನ್ನೋದನ್ನು ಹೇಳಿಕೊಡಬೇಕು ಎಂದು ಹೇಳಿದರು.

ಬರುವ ದೀಪಾವಳಿಯನ್ನು (Diwali) ಹಲಾಲ್ (Halal) ಮುಕ್ತ ದೀಪಾವಳಿಗೆ ಅಭಿಯಾನ ಶುರು ಮಾಡಿದ್ದೇವೆ. ಈಗಾಗಲೇ ರಾಜ್ಯದಲ್ಲಿ ಎಲ್ಲ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಅಭಿಯಾನ ಮಾಡುತ್ತಿದ್ದೇವೆ. ಹಲಾಲ್ ಅನ್ನೋದು ಕುರಾನ್‍ನಲ್ಲಿ ಮಾಂಸದ ಆಹಾರದಲ್ಲಿ ಮಾತ್ರವಿತ್ತು. ಇವತ್ತು ಹಲಾಲ್ ಅನ್ನೋದು ಮಾಂಸದಲ್ಲಿ ಮಾತ್ರವಲ್ಲ, ಎಲ್ಲ ಪದಾರ್ಥಗಳಲ್ಲೂ ಹಲಾಲ್ ಸರ್ಟಿಫಿಕೇಟ್ ಇದೆ. ಇದ್ರಿಂದ ಲಕ್ಷಾಂತರ ಕೋಟಿ ಹಣ ಅಲ್ ಜಮಾಯತ್ ಅಲ್ ಉಲೇಮಾ ಟ್ರಸ್ಟ್ ಅನ್ನೋದಕ್ಕೆ ಜಮಾ ಆಗಿದೆ. ಈ ಹಣ ದುಷ್ಟರಿಗೆ, ಭಯೋತ್ಪಾದಕರಿಗೆ, ಮುಸ್ಲಿಂ ಗೂಂಡಾಗಳಿಗೆ ಹೋಗ್ತಿದೆ. ಇದನ್ನು ತಡೆಯಲು ಹಲಾಲ್ ಮುಕ್ತ ದೀಪಾವಳಿ ಆಚರಣೆ ಮಾಡಬೇಕು ಎಂದು ಮನವಿ ಮಾಡಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter