ವಿಟ್ಲ ಫೆಡರೇಶನ್ ಆಫ್ ಜರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ಸಿಐಟಿಯು ಮಹಾಸಭೆ
ವಿಟ್ಲ: ಫೆಡರೇಶನ್ ಆಫ್ ಜರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ಸಿಐಟಿಯು ಇದರ ಮಹಾ ಸಭೆಯು ವಿಟ್ಲ ಕಾಶೀಮಠ ಶ್ರೀಕಾಶೀ ಯುವಕ ಮಂಡಲದ ಸೌಭಾ ಭವನದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸಂಘದ ೨೦೨೨-೨೩ ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಈ ಸಂದರ್ಭದಲ್ಲಿ ಕಾನೂನು ಸಲಹೆಗಾರ ನ್ಯಾಯಾವಾದಿ ಪದ್ಮನಾಭ ಪೂಜಾರಿ ಅಳಿಕೆ ಇವರನ್ನು ಸನ್ಮಾನಿಸಲಾಯಿತು.
ನೂತನ ಅಧ್ಯಕ್ಷ ರಮೇಶ ಶಿವಾಜಿನಗರ, ಗೌರವಾಧ್ಯಕ್ಷ ರಾಮಣ್ಣ ವಿಟ್ಲ, ಕಾರ್ಯದರ್ಶಿ ಶಿವಪ್ಪ ನಾಯ್ಕ, ಕೋಶಾಧಿಕಾರಿ ಕೆ ಪಿ ಇಸ್ಮಾಯಿಲ್ ಇವರನ್ನು ಆಯ್ಕೆ ಮಾಡಲಾಯಿತು. ತಾರಾನಾಥ, ವಿಠ್ಠಲ ಶೆಟ್ಟಿ, ಬಾಲಕೃಷ್ಣ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.