ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ”
ವಿಟ್ಲ: ವಿಠಲ ಎಜುಕೇಶನ್ ಸೊಸೈಟಿಯ ವಿಠಲ ಸುಪ್ರಜಿತ್ ಕೈಗಾರಿಕಾ ಸಂಸ್ಥೆಯಲ್ಲಿ “ಸುಪ್ರಜಿತ್ ಫೌಂಡೇಶನ್ ಬೆಂಗಳೂರು” ಇದರ ಸಂಸ್ಥಾಪಕರಾದ ಶ್ರೀ ಅಜಿತ್ ಕುಮಾರ್ ರೈಯವರು ಐಟಿಐ ವಿದ್ಯಾರ್ಥಿಗಳಿಗೆ ಕೊಡಮಾಡುವ ಪುಸ್ತಕ ವಿತರಣಾ ಕಾರ್ಯಕ್ರಮವು “ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರ”ದಲ್ಲಿ ಒಕ್ಟೋಬರ್ ೬ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಠಲ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಮುಗುಳಿ ತಿರುಮಲೇಶ್ವರ ಭಟ್, ಮುಖ್ಯ ಅತಿಥಿಗಳಾಗಿ ಸಂಚಾಲಕರಾದ ಶ್ರೀ ಎಲ್.ಯನ್ ಕೂಡೂರು, ವಿಠಲ ಸುಪ್ರಜಿತ್ ಕೈಗಾರಿಕಾ ಸಂಸ್ಥೆಯ ಸಂಚಾಲಕರಾದ ಶ್ರೀ ಅಲ್ಫಾನ್ಸ್ ಸಿಲ್ವೆಸ್ಟರ್ ಮಸ್ಕರೇನ್ಹಸ್, ಕೋಶಾಧಿಕಾರಿಗಳಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಪಿ, ವಿಠಲ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರು, ವಿಠಲ ಸುಪ್ರಜಿತ್ ಐಟಿಐಯ ಪ್ರಾಂಶುಪಾಲರಾದ ಶ್ರೀ ರಮೇಶ್ ರೈ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎ ಎಸ್ ಆದರ್ಶ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಆಡಳಿತಾಧಿಕಾರಿಯಾದ ಪ್ರಶಾಂತ್ ಚೊಕ್ಕಾಡಿಯವರು ಪ್ರಾಸ್ತಾವಿಕದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕಗಳಿಗಾಗಿ ರೂ.೯೬೦೦೦, ಐಟಿಐಗಾಗಿ ೫೦ ಲಕ್ಷ, ಕೊರೋನಾ ಸಂದರ್ಭದಲ್ಲಿ ಸಿಬ್ಬಂದಿ ವೇತನಕ್ಕೆ ೫ ಲಕ್ಷ, ೨ ಲೇತ್ ಮೆಷಿನ್, ೨ ಕಂಪ್ಯೂಟರ್ ಹಾಗೂ ೩ ಲಕ್ಷ ವಿದ್ಯಾರ್ಥಿವೇತನ ನೀಡಿದ್ದಾರೆ.
ಸುಪ್ರಜಿತ್ ಸಂಸ್ಥೆಯು ಈವರೆಗೆ ವಿದ್ಯಾರ್ಥಿವೇತನಕ್ಕಾಗಿ ೨ಕೋಟಿ ೮೦ ಲಕ್ಷ ನೀಡಿರುತ್ತದೆ ಮತ್ತು ಮುಂದೆಯು ನೀಡಲಿದೆ ಎಂದು ತಿಳಿಸಿದರು. ಎಖಿಔ ಅಲ್ಫಾನ್ಸ್ ವಿನ್ಸೆಂಟ್ ವೇಗಸ್‌ರವರು ಕಾರ್ಯಕ್ರಮವನ್ನು ನಿರೂಪಿಸಿ, ಉಪನ್ಯಾಸಕರಾದ ಮಾಧವ ವಿ.ಯಸ್‌ರವರು ಆಶಯಗೀತೆಯನ್ನು ಹಾಡಿ, ಐಟಿಐಯ ಪ್ರಾಂಶುಪಾಲರಾದ ಶ್ರೀ ರಮೇಶ್ ರೈಯವರು ಸ್ವಾಗತಸಿ, ಎಖಿಔ ಸಿಲ್ವಿಯಾ ಮರಿನಾ ಪಿಂಟೊರವರು ವಂದಿಸಿ, ಕಛೇರಿ ಸಹಾಯಕರಾದ ಲೋಕಾನಂದರವರು ಸಹಕರಿಸಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು