ಬೆಳಪು ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ : ಮೂವರು ವಶಕ್ಕೆ
ಮಂಗಳೂರು: ಬಹಳಷ್ಟು ವರ್ಷಗಳಿಂದ ದನಗಳನ್ನು ಕದ್ದು ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದ ಬೆಳಪು ತಬ್ರೇಸ್ ಎಂಬಾತನ ಮನೆಗೆ ದಾಳಿ ಮಾಡಿದ ಶಿರ್ವ ಪೊಲೀಸರು ಜೀವಂತ ಕರು, ದನದ ಮಾಂಸ ಸಹಿತ ಮೂವರು ಆರೋಪಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಬೆಳಪುವಿನ ಸುಲ್ತಾನ್ ಅಹಮ್ಮದ್ ಎಂಬವರ ಮಗ ತಬ್ರೇಸ್( 30), ಕಾಪು ಮಲ್ಲಾರಿ ಶಾಲೆ ಬಳಿ ನಿವಾಸಿ ಅಮಾನುಲ್ಲಾ ಅಸೈನ್ ಎಂಬವರ ಮಗ ಮೊಹಮ್ಮದ್ ಅಜೀಮ್(39) ಹಾಗೂ ಬೆಳಪುವಿನ ಮಥುರಾ ಸ್ಟೋರ್ ಬಳಿ ನಿವಾಸಿ ಮಕ್ಬುಲ್ ಹುಸೇನ್ ಎಂಬವರ ಮಗ ಮೊಹಮ್ಮದ್ ವಲೀದ್(20) ಬಂಧಿತ ಆರೋಪಿಗಳು.
ಆರೋಪಿಗಳು ಬೆಳಪು ಜಾರಂದಾಯ ಕೆರೆಯ ಬಳಿಯಿಂದ ಎರಡು ದನ, ಪುಂಚಲಕಾಡು ಬಾರ್ ಎದುರುರಿನ ಹಾಡಿಯ ಬಳಿಯಿಂದ ಎರಡು ದನಗಳನ್ನು ಕದ್ದು ತಂದು ಶಿರ್ವ ಪೊಲೀಸ್ ದಾಳಿಯ ವೇಳೆ ಎರಡು ದನಗಳನ್ನು ಮಾಂಸ ಮಾಡಲಾಗಿದ್ದು, ಪೊಲೀಸರನ್ನು ಕಂಡು ಓಡಲು ಯತ್ನಿಸಿದ ಮೂವರು ಕಟುಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ದನದ ಮಾಂಸ, ಒಂದು ಜೀವಂತ ಕರು ಹಾಗೂ ಮೂರು ದ್ವಿಚಕ್ರ ವಾಹನ ಹಾಗೂ ಇತರೆ ಪರಿಕರಗಳನ್ನು ವಶ ಪಡಿಸಿಕೊಂಡಿದ್ದು, ಕಾರ್ಯಚರಣೆಯ ಮುಂದಾಳತ್ವ ವಹಿಸಿದ ಶಿರ್ವ ಎಸ್ಸೈ ರಾಘವೇಂದ್ರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.