ಅಕ್ಟೋಬರ್ 18 ರ ಟೋಲ್ ಗೇಟ್ ಮುತ್ತಿಗೆಗೆ ಕಾರ್ಮಿಕರ ಬೆಂಬಲ ಘೋಷಣೆ
ಮಂಗಳೂರು: ದೇಶದ ಪ್ರಧಾನ ಕಾರ್ಮಿಕ ಸಂಘಟನೆ CITU ದ ಕ ಜಿಲ್ಲಾ ಸಮ್ಮೇಳನ ಇಂದು ಮಂಗಳೂರಿನ AKG ಭವನದಲ್ಲಿ ನಡೆಯಿತು. ಅಕ್ಟೋಬರ್ 18 ರಂದು ನಡೆಯುವ ಸುರತ್ಕಲ್ ಟೋಲ್ ಗೇಟ್ ಮುತ್ತಿಗೆ ಪ್ರತಿಭಟನೆಯನ್ನು ಬೆಂಬಲಿಸಲು ರಾಜ್ಯಾಧ್ಯಕ್ಷೆ ವರಲಕ್ಷ್ಮಿಯವರ ಉಪಸ್ಥಿತಿಯಲ್ಲಿ ಸಮ್ಮೇಳನದಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.