ನವದೆಹಲಿ: ಭಾರತ ಎಲ್ಲಿಂದ ಬೇಕಾದರೂ ತೈಲವನ್ನು ಖರೀದಿಸುತ್ತದೆ. ಆದರೆ ಈ ರೀತಿಯ ವಿಚಾರಗಳನ್ನು ಭಾರತ ಜನರವರೆಗೂ ಕೊಂಡೊಯ್ಯುವುದಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ರಷ್ಯಾ ಮತ್ತು ಉಕ್ರೇನ್ (Russia-Ukraine) ನಡುವಿನ ಸಂಘರ್ಷದಿಂದ ಇಂಧನ ಪೂರೈಕೆಗೆ ಅಡ್ಡಿಯುಂಟಾಗಿ ತೈಲ ಬೆಲೆ ಭಾರೀ ಏರಿಕೆಯಾಯಿತು. ಇದರಿಂದ ಜಾಗತಿಕವಾಗಿ ಇಂಧನ ವ್ಯವಸ್ಥೆ ಮೇಲೆ ಅಡ್ಡಪರಿಣಾಮ ಬೀರಿತು. ಈ ಬಿಕ್ಕಟ್ಟಿನ ಮಧ್ಯೆ ಹರ್ದೀಪ್ ಸಿಂಗ್ ಪುರಿ ಅವರು, ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವಂತೆ ಯಾವುದೇ ದೇಶ ಭಾರತಕ್ಕೆ ಹೇಳಿಲ್ಲ ಎಂದು ತಿಳಿಸಿದ್ದಾರೆ.

“ಭಾರತದಲ್ಲಿ ಹೆಚ್ಚಿನ ಜನಸಂಖ್ಯೆಯಿರುವುದರಿಂದ ತೈಲವನ್ನು ಖರೀದಿಸಲಾಗಿದೆ ಎಂಬ ಚರ್ಚೆಗಳು ಬೇಡ. ಭಾರತ ಎಲ್ಲಿಂದ ಬೇಕಾದರೂ ತೈಲವನ್ನು ಖರೀದಿಸುತ್ತದೆ. ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸುವಂತೆ ನಮಗೆ ಯಾರೂ ಹೇಳಿಲ್ಲ. ಭಾರತ ಸರ್ಕಾರವು ತನ್ನ ನಾಗರಿಕರಿಗೆ ಇಂಧನವನ್ನು ಒದಗಿಸುವ ನೈತಿಕ ಜವಾಬ್ದಾರಿ ಹೊಂದಿದೆ. ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವಂತೆ ಭಾರತಕ್ಕೆ ಯಾವ ದೇಶವೂ ಹೇಳಿಲ್ಲ ಎಂದಿದ್ದಾರೆ.
