ಪೊಳಲಿ: ಯಕ್ಷಕಲಾ ಪೊಳಲಿ ಇದರ ೨೭ನೇ ವರ್ಧಂತ್ಯುತ್ಸವದ ಅಂಗವಾಗಿ ಪೊಳಲಿ ಯಕ್ಷೋತ್ಸವ ೨೦೨೨ ಎಂಬ ಕಾರ್ಯಕ್ರಮವು ಶ್ರೀ ಪೊಳಲಿಯ ರಾಜಾಂಗಣದಲ್ಲಿ ಅ.೦೧ರಂದು ಶನಿವಾರ ಜರಗಿತು.

ಅಧ್ಯಕ್ಷತೆಯನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಇವರು ವಹಿಸಿದ್ದರು
ಮುಖ್ಯ ಅತಿಥಿಗಳು ರಾಮಕೃಷ್ಣ ತಪೋವನದ ವಿವೇಕಚೈತನ್ಯನಂದ ಸ್ವಾಮೀಜಿ, ಜ್ಯೋತಿಷಿ ಶ್ರೀ ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯ, ಅರ್ಚಕ ನಾರಾಯಣ ಭಟ್ ಪೊಳಲಿ, ಸದಾನಂದ ಶೆಟ್ಟಿ ರಂಗೋಲಿ, ಭುವನೇಶ್ ಪಚ್ಚಿನಡ್ಕ, ಬಂಟ್ವಾಳ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಬಂಟ್ವಾಳ, ಬಂಟ್ವಾಳ ತಾಲೂಕು ಬಿ.ಜೆ.ಪಿ. ಅಧ್ಯಕ್ಷ ದೇವಪ್ಪ ಪೂಜಾರಿ, ರಾಮಾದಾಸ್ ಬಂಟ್ವಾಳ ಮುಂತಾದವರು ಆಗಮಿಸಿದ್ದರು.

ಈ ಸಂದರ್ಭದಲ್ಲಿ ೬ಜನ ಯಕ್ಷಗಾನ ಕಲಾವಿದರಿಗೆ ಸನ್ಮಾನ, ಅಂಬುರಾಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ(ರಿ) ಸಂಸ್ಥೆಗೆ ಗೌರವಾರ್ಪಣೆ, ೪ಜನ ಗತಿಸಿದ ಕಲಾವಿದರ ಸಂಸ್ಮರಣೆ ಜರಗಿತು.

ಸಂಸ್ಥಾಪಕ ಅ.ನ.ಭ ಪೊಳಲಿ, ಶಿಕ್ಷಕ ಸುಬ್ರಾಯ ಕಾರಂತ, ಲೋಕೇಶ್ ಭರಣಿ, ಮೋಹನ ಬಿಲ್ವಪತ್ರೆ ಯಶವಂತ ಕೋಟ್ಯಾನ್ ಪೊಳಲಿ, ನವೀನ್ ಕಟ್ಟಪುಣಿ ಮೊದಲಾದವರು ಉಪಸ್ಥಿತರಿದ್ದರು.

“ಕಣಿಪುರ” ಮಾಸಪತ್ರಿಕೆಯ ಸಂಪಾದಕ ಶ್ರೀ ಎಮ್ ಎನ್ ಚಂಬಲ್ತಿಮಾರ್ ಇವರು ಕಲಾವಿದರ ಅಭಿನಂದನಾ ಭಾಷನಗೈದರು. ಸಂಸ್ಥೆಯ ಸಂಚಾಲಕ ವೆಂಕಟೇಶ್ ನಾವಡ ಪೊಳಲಿ ಸ್ವಾಗತಿಸಿದರು.

ಯಕ್ಷಗಾನ ಸಂಘಟಕ ಬಿ.ಜನಾರ್ಧನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೊಡುವಿಕೆಯಿಂದ ದಕ್ಷಯಜ್ಞ ಹಾಗೂ ಮಾನಿಷಾದ ಯಕ್ಷಗಾನ ಬಯಲಾಟ ತುಂಬಿದ ಜನಸಂದಣಿಯೊಂದಿಗೆ ಜರಗಿತು

By suddi9

Leave a Reply

Your email address will not be published. Required fields are marked *