ಪೊಳಲಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಯವರ ಚಂಡಿಕಾಯಾಗ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಭಕ್ತಾದಿಗಳಿಂದ ನಿರಂತರ ಚಂಡಿಕಾಯಾಗ ನಡೆಯುತ್ತಿದ್ದು ಸೆ.28ರಂದು ಬುಧವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಯವರ ಚಂಡಿಕಾಯಾಗ ನಡೆಯಿತು.
ದೇವಳದ ಪ್ರ.ಅರ್ಚಕರಾದ ಮಾಧವ ಭಟ್, ಕೆ. ರಾಮ್ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್ ಹಾಗೂ ಅರ್ಚಕವೃಂದ ಪೂಜೆ ನಡೆಸಿಕೊಟ್ಟರು.
ದೇವಳದ ಆಡಳಿತ ಮೊಕ್ತೇಸರರು, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.