ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ
ವಿಟ್ಲ: ಭಾರತ್ ಸ್ಕೌಟೆನ್ ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲ ಇದರ ಮಹಾಸಭೆಯು ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಭವನದಲ್ಲಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪ್ರಭಾಕರ್ ಶೆಟ್ಟಿ ದಂಬೆ ಕಾನ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಸ್ಕೌಟ್ ಆಯುಕ್ತರಾದ ಶ್ರೀರಾಮಸೇಷ ಶೆಟ್ಟಿ, ಜಿಲ್ಲಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ ಜೆ ಕಜೆ., ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಸುದರ್ಶನ್ ಪಡಿಯಾರ್, ಶ್ರೀ ಸತೀಶ್ ಆಳ್ವ ಶ್ರೀಮತಿ ಜೆಸಿಂತಾ ಸೋಫಿಯಾ, ಕಾರ್ಯದರ್ಶಿ ಶ್ರೀ ನಾರಾಯಣ ನಾಯಕ್ ಅಳಿಕೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕನ್ಯಾನ ಸ್ಕೌಟ್ ಮಾಸ್ಟರ್ ಪ್ರದೀಪ್ ಕುಮಾರ್ ಸ್ವಾಗತಿಸಿದರು ಕೋಶಾಧಿಕಾರಿ ಬಿ ವಿಶ್ವನಾಥಗೌಡ ಕ ಕುಳಾಲು ಲೆಕ್ಕಪತ್ರ ಮಂಡಿಸಿದರು ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಗೈಡ್ ಕ್ಯಾಪ್ಟನ್ ಜಯಶ್ರೀ ಅವರು ವರದಿ ವಾಚಿಸಿದರು . ಅಳಕೆ ಮಜಲು ಶಾಲೆಯ ಸ್ಕೌಟ್ ಮಾಸ್ಟರ್ ಇಸ್ಮಾಯಿಲ್ ವಂದಿಸಿದರು