ಬೆಳ್ತಂಗಡಿ: ಬಾಲಕಿಯೊಂದಿಗೆ ಅಸಭ್ಯ ವರ್ತನೆ – ಆರೋಪಿಯ ಬಂಧನ
ಪುಂಜಾಲಕಟ್ಟೆ: ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಎಂಬಲ್ಲಿ ಯುವಕನೋರ್ವ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮಹಮ್ಮದ್ ಸಿರಾಜ್ (28) ನನ್ನು ಪುಂಜಾಲಕಟ್ಟೆ ಠಾಣೆ ಪೊಲೀಸರು ಪೋಕ್ಸ್ ಕಾಯ್ದೆಯಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿದೆ.
ಸರಕಾರಿ ಶಾಲಾ ಮೈದಾನದಲ್ಲಿ ಸಂಜೆ ಶಾಲೆ ಬಿಡುವ ಹೊತ್ತು ನಿಂತಿದ್ದ ಶಾಲಾ ಬಸ್‌ನ ಒಳಗಡೆ ಪಾನಮತ್ತನಾಗಿ ಅಕ್ರಮವಾಗಿ ಪ್ರವೇಶಗೈದ ಆರೋಪಿ ಬಾಲಕಿ ಜತೆ ಅಸಭ್ಯವಾಗಿ ವರ್ತಿಸಿದ್ದು, ಮರುದಿನ ವಿದ್ಯಾರ್ಥಿನಿ ಶಾಲೆಗೆ ಹೋಗದಿರುವ ಬಗ್ಗೆ ಹೆತ್ತವರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇನ್ನು ಹೆತ್ತವರು ಶಾಲೆಗೆ ಬಂದು ಬಸ್ ಚಾಲಕ ಇಸುಬು ಎನ್ನುವಾತನಲ್ಲಿ ವಿಚಾರಿಸಿ ಬಳಿಕ ಶಾಲಾ ಮುಖ್ಯ ಶಿಕ್ಷಕರಲ್ಲಿ ಈ ಬಗ್ಗೆ ತಿಳಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.