ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಧ್ವನಿ ಮತದ ಮೂಲಕ ನೂತನ ಬಿಜೆಪಿ ಸರಕಾರವನ್ನು ಬಚಾವ್ ಮಾಡಿದ್ದಾರೆ. ಇಂದು ನಡೆದ ಅಲ್ಪಸಂಖ್ಯಾತ ಸಕರ್ಾರದ ವಿಶ್ವಾಸಮತ ಯಾಚನೆಯಲ್ಲಿವಿಶ್ವಾಸಮತ ಯಾಚನೆ ವೇಳೆ ಎನ್ಸಿಪಿ ಸದಸ್ಯರು ಅನುಪಸ್ಥಿತರಿದ್ದರಿಂದ ಬಿಜೆಪಿಗೆ ಗೆಲುವು ಸಾಧ್ಯವಾಯಿತು. ಶಿವಸೇನೆ ಮತ್ತು ಕಾಂಗ್ರೆಸ್ ಪಕ್ಷಗಳು ಸಕರ್ಾರದ ವಿರುದ್ಧ ಮತ ಹಾಕಿದ್ದಾರೆ.
ಇನ್ನು, ಭಾರತೀಯ ಜನತಾ ಪಕ್ಷದ ಹರಿಭಾವು ಬಾಗಡೆಯವರು ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಶಿವಸೇನೆಯ ಏಕನಾಥ್ ಶಿಂಧೆಯವರು ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 122 ಸ್ಥಾನಗಳನ್ನ ಹೊಂದಿದೆ. ಶಿವಸೇನೆ ಎರಡನೇ ಗರಿಷ್ಠ ಪಕ್ಷವಾಗಿ ಹೊರಹೊಮ್ಮಿದೆ.

