ಬೆಂಗಳೂರು: ವಿವಿಧ ರಾಜ್ಯಗಳಿಂದ ರಾಜ್ಯಸಭೆಗೆ ಚುನಾಯಿತರಾದ 24 ಮಂದಿ ಸದಸ್ಯರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕದಿಂದ ಆಯ್ಕೆಯಾದ ಜಗ್ಗೇಶ್, ಲೆಹರ್ ಸಿಂಗ್, ಜೈರಾಮ್ ರಮೇಶ್, ನಿರ್ಮಲಾ ಸೀತರಾಮನ್ ಇದೇ ವೇಳೆ ಪ್ರಮಾಣ ವಚನ ಸ್ವೀಕರಿಸಿದರು‌.

ನಟ ಜಗ್ಗೇಶ್ ಕನ್ನಡದಲ್ಲಿ‌ ಹಾಗೂ ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಬಿಜೆಪಿ ಹಿರಿಯ ನಾಯಕ ಲೆಹರ್ ಸಿಂಗ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಪಿಯೂಷ್ ಗೋಯೆಲ್, ಮುಕುಲ್ ವಾಸ್ನಿಕ್, ಸುರೇಂದ್ರ ಕುಮಾರ್, ಲಕ್ಷ್ಮಿಕಾಂತ್ ಬಾಜಪೇಯ್, ನಾಬುರಾವ್ ನಿಶಾದ್, ಧನಜಯ್ ಮಧು, ಘನಶಾಮ್ ತಿವಾರಿ ಸೇರಿ 24 ಮಂದಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಸಭಾಧ್ಯಕ್ಷ ವೆಂಕಯ್ಯನಾಯ್ಡು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *