Published On: Thu, Jul 7th, 2022

ಕಾಡಮಲ್ಲಿಗೆ ಖ್ಯಾತಿಯ ಬೆಳ್ಳಾರೆ ವಿಶ್ವನಾಥ ರೈ ಇನ್ನಿಲ್ಲ

ಪುತ್ತೂರು: ಬೆಳ್ಳಾರೆ ಸುಬ್ಬಯ್ಯ ರೈ ಮತ್ತು ಮಂಜಕ್ಕೆ ಇವರ ನಾಲ್ವರು ಮಕ್ಕಳಲ್ಲಿ ವಿಶ್ವನಾಥ ರೈ ಒಬ್ಬರು ಇವರು 28-2-1949 ರಲ್ಲಿ ಬೆಳ್ಳಾರೆಯಲ್ಲಿ ಜನಿಸಿದರು ಶಿಕ್ಷಣ 2 ನೇ ತರಗತಿ ಇಬ್ಬರು ಅಕ್ಕಂದಿರು ಒಬ್ಬಾಕೆ ತಂಗಿ. ಅಚ್ಚುತ ಮಣಿಯಾಣಿ ಯವರಿಂದ ಯಕ್ಷ ನಾಟ್ಯಾಭ್ಯಾಸ ಮಾಡಿ ತನ್ನ 9ನೇ ವರ್ಷ ಪ್ರಾಯದಲ್ಲಿ ರಂಗಪ್ರವೇಶ ಮಾಡಿದರು ರಾಜನ್ ಅಯ್ಯರ್ ಮತ್ತು ಕೇಶವ ಮಾಸ್ತರ್ ಅವರಿಂದ ಭರತನಾಟ್ಯವನ್ನೂ ಅಭ್ಯಾಸ ಮಾಡಿದರು.WhatsApp Image 2022-07-07 at 10.12.26 AM

ಬಾಲಕನಿದ್ದಾಗಲೇ ತನ್ನ ಅಭಿನಯಕ್ಕೆ ಮಾಸ್ಟರ್ ಹಿರಣ್ಣಯ್ಯರಿಂದ ಚಿನ್ನದ ಉಂಗುರದ ಸನ್ಮಾನ ಸ್ವೀಕರಿಸಿದ್ದಾರೆ. ಕರ್ನಾಟಕ ಮೇಳ ಒಂದರಲ್ಲೇ 35 ವರುಷಗಳ ತಿರುಗಾಟ ಮಾಡಿದ್ದಾರೆ.

ಉಳಿದಂತೆ ಮಧೂರು ಮೇಳ 1 ವರುಷ ಸುರತ್ಕಲ್ ಮೇಳ 5 ವರುಷ. ಕದ್ರಿ ಮೇಳ 2 ವರುಷ. ಬಪ್ಪನಾಡು 1 ವರುಷ. ಕುಂಟಾರು ಮೇಳ 2 ವರುಷ. ಎಡನೀರು 1 ವರುಷ ಕಟೀಲು ಮೇಳ 3 ವರುಷ ತಿರುಗಾಟ ಮಾಡಿದ್ದಾರೆ.

ಇವರು ಅಲ್ಪ ಕಾಲದ ಅನಾರೋಗ್ಯದಿಂದ ನಿನ್ನೆ ಬೆಳ್ಳಾರೆಯ ಸ್ವಗ್ರಹದಲ್ಲಿ ಇಹಲೋಕ ತ್ಯಜಿಸಿದರು ಇಂದು ಮದ್ಯಾಹ್ನ ಅವರ ಪಾರ್ಥಿವ ಶರೀರದ ಅಂತ್ಯ ಕ್ರಿಯೆ ಬೆಳ್ಳಾರೆಯಲ್ಲಿ ಜರಗಲಿದೆ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter