”ಕುಡಲಾ ಕುಡಲಾ ಕುಡ್ಲಾ” ಜು.3ರಂದು ತಾರೀಖು ಐಲೇಸಾದ ವಿಶೇಷ ರೇಡಿಯೋ ನೆನಪಾಧಾರಿತ ಕಾರ್ಯಕ್ರಮ.
ಮಂಗಳೂರು: ಮನರಂಜನೆಗೆ ಬರೀ ರೇಡಿಯೋ ಮಾತ್ರ ಇದ್ದ ಕಾಲದಲ್ಲಿ ರೇಡಿಯೋ ನೆನಪುಗಳು ಅನೀರ್ವಚನೀಯ ಆನಂದ ಕೊಡುತ್ತಿದ್ದುದು ಇಂದಿಗೂ ಮರೆಯಲಾರದ ನೆನಪು. ಈ ನೆನಪುಗಳನ್ನು ಆಧರಿಸಿ ಐಲೇಸಾ – ದಿ ವಾಯ್ಸ್ ಆಫ್ ಓಷನ್ ರಿ. ಸಂಸ್ಥೆ ಈ ಸಾರಿ ಕುಡಲಾ ಕುಡಲಾ ಕುಡ್ಲಾ ( ಮತ್ತೆ ಮತ್ತೆ ಮಂಗಳೂರು) ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಜೂಮ್ ಡಿಜಿಟಲ್ ವೇದಿಕೆಯಲ್ಲಿ ಜು.3ರಂದು ಸಂಜೆ ೭;೩೦ಕ್ಕೆ ನಡೆದ ಈ ಕಾರ್ಯಕ್ರಮದಲ್ಲಿ ಮಂಗಳೂರು ಆಕಾಶವಾಣಿಯಲ್ಲಿ ದುಡಿದ ಹಾಲಿ ಉದ್ಯೋಗಿಗಳಾದ ಕಾನ್ಸೆಪ್ಟಾ ಫೆರ್ನಾಂಡಿಸ್ , ಪ್ರವೀಣ್ ಅಮ್ಮೆ೦ಬಳ ಮತ್ತು ನಿವೃತ್ತ ಆಕಾಶವಾಣಿ ಉದ್ಘೋಷಕ ಮುದ್ದು ಮೂಡುಬೆಳ್ಳೆ ಅವರು ಅತಿಥಿಗಳಾಗಿ ಭಾಗವಹಿಸಿ ತಮ್ಮ ನೆನಪುಗಳನ್ನು ಹಂಚಿದರು.
ಕಾರ್ಯಕ್ರಮ ಪೂರ್ತಿ ರೇಡಿಯೋ ಕೇಳುವಿಕೆಯ ರೀತಿಯಲ್ಲಿ ವಿಶೇಷವಾಗಿ ಸಂಯೋಜಿಸಿದ್ದು ಮುಂಬೈನ ರಂಗಭೂಮಿಯ ಕರ್ನಾಟಕ ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ ವಿಜೇತ ಕಲಾವಿದ ಮೋಹನ್ ಮಾರ್ನಾಡು ವಿಶೇಷವಾಗಿ ಭಾಗವಹಿಸಿದ್ದು , ಸೂರಿ ಮಾರ್ನಾಡು ಮತ್ತು ಆಶಾ ಮಾರ್ನಾಡು ಕೂಡಾ ಪಾತ್ರ ಹಂಚಿಕೊಂಡಿದ್ದಾರೆ .
ಮಂಗಳೂರು ಆಕಾಶವಾಣಿಯ ಲತೀಶ್ ಪಾಲ್ದನೆ ಕಾರ್ಯಕ್ರಮ ನಿರೂಪಿಸುವುದರ ಜೊತೆಗೆ ರೇಡಿಯೋ ಬಗ್ಗೆ ವಿಶೇಷ ಮಾಹಿತಿ ಹಂಚಿ ಕೊಳ್ಳಲಿದ್ದಾರೆ . ಮತ್ತೊಬ್ಬ ಉದ್ಘೋಷಕಿ ಅಕ್ಷತಾ ಪೆರ್ಲ ಕಾರ್ಯಕ್ರಮದ ನಿರೂಪಣೆಗೆ ಸಹಕರಿಸಿದ್ದಾರೆ.
ಸಂಗ್ರಹ ಯೋಗ್ಯ ಈ ಅನನ್ಯ ಕಾರ್ಯಕ್ರಮದಲ್ಲಿ Zoom id : 83092043842 Pass Code:ilesa ಬಳಸಿ ಭಾಗವಹಿಸಲು ಐಲೇಸಾದ ಮುಂಬೈ ಸಂಚಾಲಕ ಸುರೇಂದ್ರ ಮಾರ್ನಾಡು ವಿನಂತಿಸಿದ್ದಾರೆ.