ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದ ಸಂಚಾಲಕರಾಗಿ ನವೀನ್ ಅಮೀನ್ ಶಂಕರಪುರ ಆಯ್ಕೆ
ಪುತ್ತೂರು: ಸಮಾಜದ ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾನು ತೊಡಗಿಸಿಕೊಂಡು ಆ ಮೂಲಕ ಜನ ಸಾಮಾನ್ಯರ ಸೇವೆಯೇ ಜೀವನದ ಪರಮೋಚ್ಚ ಕಾರ್ಯ ಎಂಬ ಸಂದೇಶವನ್ನು ಮುಂದಿನ ಪೀಳಿಗೆ ಪರಿಚಯ ಮಾಡಿಕೊಟ್ಟವರು.
ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಇವರು ತಾನು ಎಷ್ಟೇ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು ಕೈಗೊಂಡ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಪೂರೈಸಿ ಪ್ರತಿಯೊಂದು ಸಂಘ ಸಂಸ್ಥೆಗೆ ತಮ್ಮ ದಿನದ ಕೆಲಸಕಾರ್ಯಗಳಲ್ಲಿ ಸಮಯವನ್ನು ಮೀಸಲಿಟ್ಟವರು ಮಾಜಿ ತಾಲೂಕು ಪಂಚಾಯತ್ ಸದಸ್ಯರಾಗಿ, ಕಟಪಾಡಿ ವಿಶ್ವನಾಥ ಕ್ಷೇತ್ರದ ಆಡಳಿತ ಸಮಿತಿಯ ಸದಸ್ಯರು ಯುವವಾಹಿನಿ, ಕಟಪಾಡಿ ಘಟಕದ ಪೂರ್ವ ಅಧ್ಯಕ್ಷರು ಬಿಲ್ಲವರ ಪರಿಷತ್ತು ಉಡುಪಿ ಜಿಲ್ಲೆಯ ಅಧ್ಯಕ್ಷರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ, ಜನಜಾಗೃತಿ ವೇದಿಕೆ, ಜಿಲ್ಲಾಧ್ಯಕ್ಷರಾಗಿ, ಗೆಜ್ಜೆಗಿರಿ ಇದರ ಆಡಳಿತ ಮಂಡಳಿಯ ಸದಸ್ಯರಾಗಿ, ರೋಟರಿ ಸಂಸ್ಥೆಯಲ್ಲಿ ಸಹಾಯಕ ಜಿಲ್ಲಾ ಗವರ್ನರ್ ಆಗಿ, ಜೇಸಿ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆಯಲ್ಲಿ ರಾಷ್ಟ್ರೀಯ ಸಂಯೋಜಕರಾಗಿ, ನಾರಾಯಣ ಗುರು ಅರ್ಬನ್ ಕಾರ್ಪೊರೇಟಿವ್ ಬ್ಯಾಂಕ್, ಉಡುಪಿ ಇದರ ಆಡಳಿತ ಮಂಡಳಿ ಸದಸ್ಯರಾಗಿ ವಿವಿಧ ಶಾಲೆ, ದೈವಸ್ಥಾನ, ದೇವಾಲಯಗಳ ಜೀರ್ಣೋದ್ಧಾರ ಸಮಿತಿಯ ವಿವಿಧ ಜವಾಬ್ದಾರಿಗಳ ಜೊತೆಗೆ ಹತ್ತು ಹಲವು ಸಂಘಟನೆಗಳಲ್ಲಿ ತನ್ನನ್ನು ತಾವು ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಾ ಇದೀಗ ದೇಯಿಬೈದ್ಯೆತಿ ಕೋಟಿ-ಚೆನ್ನಯ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿಯ ಸಂಚಾಲಕರಾಗಿ ನವೀನ್ ಅಮೀನ್ ಶಂಕರಪುರ ಆಯ್ಕೆಯಾಗಿದ್ದಾರೆ.