ನಿಡ್ಲೆ: ನಿಡ್ಲೆ ಗ್ರಾಮದ ಬಿರ್ಲಾಜೆ ಮನೆ ನಿವಾಸಿ ಹರೀಶ್ ಎಂಬವರಿಗೆ ಬ್ಯಾಂಕ್ ನಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಓಟಿಪಿ ಪಡೆದು ಮೂರು ಬಾರಿ 10,236, 4,000,500 ರೂಪಾಯಿ ಸೇರಿ ಒಟ್ಟು 15,000 ರೂ ಹಣವನ್ನು ದೆಹಲಿ ಮೂಲದ ಬ್ಯಾಂಕ್ ಖಾತೆಗೆ ವರ್ಗಾಯಿಸಿ ವಂಚಿಸಿರುವ ಘಟನೆ ನಿಡ್ಲೆ ಯಲ್ಲಿ ನಡೆದಿದೆ.WhatsApp Image 2022-06-30 at 11.59.32 AM

ಧರ್ಮಸ್ಥಳದಲ್ಲಿ ಉದ್ಯೋಗದಲ್ಲಿದ್ದ ಹರೀಶ್ ಬಿ ಅವರಿಗೆ 6296877181 ನಂಬರಿನಿಂದ ಕರೆ ಬಂದಿದ್ದು, “ನಾವು ಬ್ಯಾಂಕ್ ಕಚೇರಿಯಿಂದ ಮಾತನಾಡುವುದು ಎಂದು ಹೇಳಿ ನಿಮ್ಮ ಖಾತೆ ಆಗಿದ್ದು, ಅದನ್ನು ಸರಿಪಡಿಸುತ್ತೇವೆ. ನಿಮಗೆ ಒಂದು ಒಟಿಪಿ ಬಂದಿದೆ ಅದನ್ನು ಹೇಳಿ ಎಂದು ತಿಳಿಸಿದ್ದು, ಅದರಂತೆ ಒಟಿಪಿ ಹೇಳಿದ ಬಳಿಕ ತಮ್ಮ ಖಾತೆಯಿಂದ ಹಣ ವರ್ಗಾವಣೆಗೊಂಡ ಬಗ್ಗೆ ಮೊಬೈಲ್ ಗೆ ಮೆಸೇಜ್ ಬಂದಿದೆ ಅದನ್ನು ಪರಿಶೀಲನೆ ಮಾಡಿದಾಗ ಅನಾಮಿಕನ ಕರೆಗೆ ಮೋಸ ಹೋಗಿರುವುದು ಗೊತ್ತಾಗಿ ಈ ಬಗ್ಗೆ ಹರೀಶ್ ಬಿ ನಿಡ್ಲೆ ಕೆನರಾ ಬ್ಯಾಂಕ್ ಗೆ ದೂರು ನೀಡಿದ್ದು ನಂತರ ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಗೆ ದೂರು ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *