Published On: Wed, Jun 29th, 2022

ಭಟ್ಕಳದಲ್ಲಿ ಭುಗಿಲೆದ್ದ ಭಾಷಾ ವಿವಾದ : ಪುರಸಭೆ ಕಟ್ಟಡಕ್ಕೆ ಉರ್ದು ಭಾಷೆ ಫಲಕ!

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪುರಸಭೆ ಆಡಳಿತ ತೆಗೆದುಕೊಂಡ ನಿರ್ಧಾರದಿಂದ ಇದೀಗ ಭಾಷಾ ವಿವಾದ ಕಾರವಾರದಿಂದ ಭಟ್ಕಳದ ಗಡಿಯವರೆಗೂ ತಲುಪಿದೆ. ಪುರಸಭಾ ಕಾರ್ಯಾಲಯದ ಕಟ್ಟಡದಲ್ಲಿ ಉರ್ದು ನಾಮಫಲಕ ಅಳವಡಿಸುವುದನ್ನು ವಿರೋಧಿಸಿ ಜೂ.27ರಂದು ಸೋಮವಾರ ಕನ್ನಡ ಹಾಗೂ ಹಿಂದೂ ಸಂಘಟನೆಗಳು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

bhatkal

ಪುರಸಭೆ ಕಟ್ಟಡಕ್ಕೆ ಹೊಸದಾಗಿ ಬಣ್ಣ ಬಳಿದ ನಂತರ ಸೋಮವಾರ ಪುರಸಭೆ ಎದುರು ನಾಮಫಲ ಅಳವಡಿಸಲು ಗುತ್ತಿಗೆದಾರ ಸಿದ್ದತೆ ಮಾಡಿಕೊಂಡಿದ್ದರು. ಕನ್ನಡ, ಇಂಗ್ಲೀಷ ನಂತರ ಉರ್ದು ಭಾಷೆಯಲ್ಲಿ “ಪುರಸಭಾ ಕಾರ್ಯಾಲಯ ಭಟ್ಕಳ” ಎಂಬ ನಾಮಫಲಕವನ್ನು ಅಳವಡಿಸಲಾಗುತಿತ್ತು.

ಈ ಸಂದರ್ಭದಲ್ಲಿ ಭುವನೇಶ್ವರಿ ಕನ್ನಡ ಸಂಘ ಅಧ್ಯಕ್ಷ ರಮೇಶ್ ನಾಯ್ಕ ಮತ್ತು ಶ್ರೀಕಾಂತ್ ನಾಯ್ಕ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter