ಬಂಟ್ವಾಳ: ದ.ಕ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಳ ನಿ. ಇದರ ಅಧ್ಯಕ್ಷರಾಗಿ ಕೆ.ಸಂಜೀವ ಪೂಜಾರಿ, ಉಪಾಧ್ಯಕ್ಷರಾಗಿ ರಾಜೇಶ್ ಸುವರ್ಣ ಅವಿರೋಧವಾಗಿ ಆಯ್ಕೆಯಾಗಿದರು. ಸಂಘದ ಆಡಳಿತ ಮಂಡಳಿಗೆ ಇತ್ತೀಚೆಗೆ ಆಯ್ಕೆ ಪ್ರಕ್ರಿಯೆ ನಡೆದು, ೧೩ ಮಂದಿ ನಿರ್ದೇಶಕರು ಅವಿರೋಧವಾಗಿ ನೇಮಕಗೊಂಡಿದ್ದರು. ಮಹಾಮಂಡಳಕ್ಕೆ ಅಧ್ಯಕ್ಷ ಉಪಾದ್ಯಕರ ಆಯ್ಕೆ ಪ್ರಕ್ರಿಯೆ ಜೂ.೦೪ರಂದು ಶನಿವಾರ ನಡೆಯಿತು.WhatsApp Image 2022-06-04 at 5.29.10 PM

ರಿಟರ್ನಿಂಗ್ ಅಧಿಕಾರಿಯಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್ ಕೆ ಚುನಾವಣ ಪ್ರಕ್ರಿಯೆ ನಡೆಸಿಕೊಟ್ಟರು. ನೂತನ ಆಡಳಿತ ಮಂಡಳಿ ನಿರ್ದೇಶಕರಾದ, ಪುರುಷ ಸಾಲ್ಯಾನ್, ವಿಜಯ್ ಕುಮಾರ್ ಸೊರಕೆ, ಆರ್ .ಸಿ. ನಾರಾಯಣ, ಕೆ. ವಿಶ್ವನಾಥ ಪೂಜಾರಿ ಪಂಜ, ಅಣ್ಣಿಯಾನೆ ನೋಣಯ್ಯ ಪೂಜಾರಿ, ಹರೀಶ್ ಸುವರ್ಣ, ಪದ್ಮನಾಭ ಕೋಟ್ಯಾನ್, ಗಣೇಶ್ ಪೂಜಾರಿ, ಬೇಬಿ ಕುಂದರ್, ಶೈಲಜಾ, ಉಷಾ ಅಂಚನ್, ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಕುಮಾರ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *