ತುಮಕೂರು: ಒಂದು ತಿಂಗಳು ಕಳೆದರೂ ದಲಿತ ಮಹಿಳೆಯೊಂದಿಗೆ ಸುಮಾರು 3 ವರ್ಷಗಳ ಕಾಲ ದೈಹಿಕ ಸಂಪರ್ಕ ಹೊಂದಿ ಅತ್ಯಾಚಾರವೆಸಗಿರುವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.
ಠಾಣೆಯಲ್ಲಿ ಮೇ 4ರಂದು ಬುಧವಾರ ದೂರು ನೀಡಿದ್ದರೂ ರಾಜಕೀಯ ಪ್ರಭಾವದಿಂದಾಗಿ ಆರೋಪಿಯನ್ನು ಬಂಧಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ನಗರದ ಕುಂದೂರು ಕ್ರಾಸ್, ಬೆಳಗುಂಬ ರಸ್ತೆಯಲ್ಲಿ ವಾಸವಿದ್ದ ಮಹಿಳೆಯೊಂದಿಗೆ ವಡ್ಡರಹಳ್ಳಿಯ ತಿಗಳ ಸಮುದಾಯದ ಕೆಂಪಣ್ಣ 2019ರಿಂದ ಲೈಂಗಿಕ ಸಂಪರ್ಕ ಹೊಂದಿ ಮೋಸ ಮಾಡಿದ್ದಾನೆ ಎಂದು ನೊಂದ ಸಂತ್ರಸ್ತೆ,
ನೊಂದ ಮಹಿಳೆ ಹೇಳಿದ್ದೇನು?: ಕೆಂಪಣ್ಣ ಎಂಬ ವ್ಯಕ್ತಿ ನನ್ನನ್ನು ಗಂಡನಿಂದ ದೂರಮಾಡಿ ಮದುವೆಯಾಗುವುದಾಗಿ ನಂಬಿಸಿ 2019ರಿಂದ ದೈಹಿಕ ಸಂಪರ್ಕ ಬೆಳೆಸಿಕೊಂಡಿದ್ದರು. ನಂತರ ದಲಿತ ಮಹಿಳೆ, ಕಪ್ಪಾಗಿರುವ ಎಂಬ ಕಾರಣ ಕ್ಕಾಗಿ ನನ್ನನ್ನು ದೂರ ಮಾಡಿ ಸುಂದರವಾಗಿ ರುವ ಕ್ರೈಸ್ತ ಸಮುದಾಯದ ಮಹಿಳೆಯೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದಾನೆ. ಈತನನ್ನು ನಂಬಿ ಗಂಡನನ್ನು ದೂರಮಾಡಿಕೊಂಡೆ. ಈಗ ಜೀವನವೇ ಬೇಡವೆನಿಸಿದೆ. ನ್ಯಾಯ ಸಿಗದಿದ್ದರೆ ಸಾಯುವು ದೊಂದೆ ಬಾಕಿ ಎಂದು ನೊಂದ ಮಹಿಳೆ ಅಳಲು ತೋಡಿಕೊಂಡರು.
ಗ್ರಾಮಾಂತರ ವ್ಯಾಪ್ತಿಯ ಹಿರೇಹಳ್ಳಿಯಲ್ಲಿ ನಡೆದ ಮಹಿಳೆ ಮೇಲಿನ ದೌರ್ಜನ್ಯ, ಹತ್ಯೆ, ಹಾಗೂ ಪಂಡಿತನಹಳ್ಳಿ ಬಾಲಕಿ ಮೇಲಿನ ಅತ್ಯಾಚಾರ ಘಟನೆ ಮಾಸುವ ಮುನ್ನವೇ ಸದರಿ ಪ್ರಕರಣ ನಡೆದಿರುವುದು ಪೊಲೀಸ್ ಪ್ರಶ್ನಿಸುವಂತಿದೆ
ದಲಿತ ಸಮುದಾಯದ ಕಿಡಿ: ದೈಹಿಕ, ಮಾನಸಿಕವಾಗಿ ಅನ್ಯ ಸಮುದಾಯದವರಿಂದ ದಲಿತರ ಮೇಲೆ ದೌರ್ಜನ್ಯ, ಹಿಂಸೆ ನಡೆಯುತ್ತಿದ್ದರೂ ಅಧಿಕಾರಿಗಳು, ರಾಜಕಾರಣಿಗಳು ನ್ಯಾಯಕೊಡಿಸುವಲ್ಲಿ ವಿಫಲರಾಗಿದ್ದಾರೆ. ದಲಿತ ಮಹಿಳೆಯನ್ನು ಲೈಂಗಿಕ ತೃಷೆಗಾಗಿ ಬಳಸಿಕೊಂಡು ಅತ್ಯಾಚಾರ ಮಾಡಿರುವ ಆರೋಪಿ ಕೆಂಪಣ್ಣ ನನ್ನು ಬಂಧಿಸಿ ನೊಂದ ಮಹಿಳೆಗೆ ನ್ಯಾಯ ಕೊಡಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗು ವುದು ಎಂದು ದಲಿತ ಸಂಘಟನೆಗಳು, ಸಮುದಾಯದ ಮುಖಂಡರು ಕಿಡಿಕಾರಿದ್ದಾರೆ.
