ದಡ್ಡಲಕಾಡು: ವಿದ್ಯಾರ್ಥಿ ಸಂಘಟನೆ ಪ್ರಮಾಣ ವಚನ ಸ್ವೀಕಾರ
ಬಂಟ್ವಾಳ: ಇಲ್ಲಿನ ದಡ್ಡಲಕಾಡು ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘಕ್ಕೆ ಆಯ್ಕೆಗೊಂಡ ನೂತನ ಮಂತ್ರಿಮಂಡಲ ಮತ್ತು ವಿವಿಧ ಕ್ಲಬ್ ಮುಖ್ಯಸ್ಥರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಬುಧವಾರ ನಡೆಯಿತು.
ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೌಢಶಾಲಾ ಮುಖ್ಯಶಿಕ್ಷಕ ರಮಾನಂದ ಪ್ರಮಾಣವಚನ ಭೋದಿಸಿದರು. ಉದ್ಯಮಿ ವಿಜೇಶ್ ಸಪಲ್ಯ ಜಕ್ರಿಬೆಟ್ಟು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಅಂಚನ್, ಸಿಆರ್‌ಪಿ ಮಲ್ಲಿಕಾರ್ಜುನ, ಟ್ರಸ್ಟಿ ರಾಮಚಂದ್ರ ಪೂಜಾರಿ ಕರೆಂಕಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಮೌರೀಸ್ ಡಿಸೋಜಾ ಇದ್ದರು. ವಿದ್ಯಾರ್ಥಿನಿ ನವ್ಯಶ್ರೀ ಸ್ವಾಗತಿಸಿ, ದೀಕ್ಷಾ ವಂದಿಸಿದರು. ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.